ಪಡುಬಿದ್ರಿಯಲ್ಲಿ ಶೀಘ್ರ ಅಗ್ನಿಶಾಮಕ ಠಾಣೆ: ಆರಗ ಜ್ಞಾನೇಂದ್ರ

Prasthutha|


ಬೆಂಗಳೂರು : ಉಡುಪಿ ಜಿಲ್ಲೆ ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರೆಗೆ ಕೆ-ಸೇಪ್-2ಯೋಜನೆಯಡಿ ಶೀಘ್ರವೇ ಅಗ್ನಿಶಾಮಕ ಠಾಣೆ ಮಂಜೂರು ಮಾಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಸಭೆಯಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಪು ಶಾಸಕ ಲಾಲ್ಜಿಆರ್. ಮೆಂಡನ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಡುಬಿದ್ರಿಯೂ ಉಡುಪಿ, ಕಾರ್ಕಳ ಮತ್ತು ಕಾಪುವಿಗೆ ಹೋಗಿ ಬರಲು ದೂರವಾಗುತ್ತದೆ. ಹೀಗಾಗಿ 2024-25ನೇ ಸಾಲಿನ ಕೆ-ಸೇಪ್-2 ಅಗ್ನಿಶಾಮಕ ಠಾಣೆಯನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಪಡುಬಿದ್ರಿಯ ನಂದಿಕೂರು ಕೈಗಾರಿಕಾ ಪ್ರದೇಶವಾಗಿದೆ. ಒಂದು ವೇಳೆ ಇಲ್ಲಿ ಅಗ್ನಿ ಅವಘಡಗಳು ಸಂಭವಿಸಿದರೆ,ಉಡುಪಿಯಿಂದ 28 ಕಿ.ಮೀ. ಮಲ್ಪೆಯಿಂದ 35 ಕಿ.ಮೀ. ಕದ್ರಿಯಿಂದ 34 ಕಿಮೀ. ಅಂತರದಲ್ಲಿದೆ. ಹೀಗಾಗಿ ನಾವು ಆದ್ಯತೆ ಮೇರೆಗೆ ಠಾಣೆಯನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದರು.



Join Whatsapp