ಗುಜರಾತ್ ಮಾಜಿ ಸಿಎಂ ಕೇಶುಭಾಯಿ ಪಟೇಲ್ ನಿಧನ | ಗಣ್ಯರ ಸಂತಾಪ
Prasthutha: October 29, 2020

ಅಹಮದಾಬಾದ್ : ಗುಜರಾತ್ ಮಾಜಿ ಸಿಎಂ ಕೇಶುಭಾಯಿ ಪಟೇಲ್ ಗುರುವಾರ ನಿಧನರಾಗಿದ್ದಾರೆ. ಮೃತರಿಗೆ 92 ವಯಸ್ಸಾಗಿತ್ತು. ಕಳೆದ ತಿಂಗಳು ಪಟೇಲ್ ಗೆ ಕೊರೊನ ವೈರಸ್ ಪಾಸಿಟಿವ್ ದೃಢಪಟ್ಟಿತ್ತು. ಆದರೆ, 10 ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಆದಾಗ್ಯೂ, ಗುರುವಾರ ಮುಂಜಾನೆ ಅವರ ಆರೋಗ್ಯ ಹದಗೆಟ್ಟಿದುದರಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕೋವಿಡ್ 19ರಿಂದ ಗುಣಮುಖರಾಗಿದ್ದರೂ, ಅವರ ಆರೋಗ್ಯದ ಮೇಲೆ ಅದು ಪರಿಣಾಮ ಬೀರಿತ್ತು. ಕೊರೊನಾ ವೈರಸ್ ನಿಂದಾಗಿ ಅವರು ಮೃತಪಟ್ಟಿದ್ದಲ್ಲ ಎಂದು ಆಸ್ಪತ್ರೆ ಮೂಲಗಳು ದೃಢಪಡಿಸಿವೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತಿತರ ಗಣ್ಯರು ಪಟೇಲ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
