ಕೇರಳದ ಮೊದಲ ತೃತೀಯಲಿಂಗಿ ಬಾಡಿಬಿಲ್ಡರ್​ ಆತ್ಮಹತ್ಯೆ

Prasthutha|

- Advertisement -

ಕೇರಳದ ಮೊದಲ ತೃತೀಯಲಿಂಗಿ ಬಾಡಿಬಿಲ್ಡರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರವೀಣ ನಾಥ್ ಆತ್ಮಹತ್ಯೆ ಮಾಡಿಕೊಂಡವರು.

ಪ್ರವೀಣ್ ನಾಥ್ ಅವರು ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದೇಹವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇರಿಸಲಾಗಿದೆ.

- Advertisement -

ಪ್ರವೀಣ್ ಈ ವರ್ಷ ಪ್ರೇಮಿಗಳ ದಿನದಂದು ರಿಶಾನಾ ಆಯೇಶು ಎಂಬವರನ್ನು ಮದುವೆಯಾಗಿದ್ದರು.

ಪ್ರವೀಣ್ ಮಿಸ್ಟರ್ ಕೇರಳ ಪ್ರಶಸ್ತಿಯನ್ನೂ ಗೆದ್ದಿದ್ದಾರೆ. ಇದಲ್ಲದೇ ರಿಶಾನಾ ಮಿಸ್ ಮಲಬಾರ್ ಪಟ್ಟ ಗೆದ್ದಿದ್ದಾರೆ. ಆರಂಭದಲ್ಲಿ ಇಬ್ಬರ ಮನೆಯವರು ಇವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ನಂತರ ಅವರು ಈ ಮದುವೆಗೆ ಒಪ್ಪಿದ್ದರು.

ಪ್ರವೀಣ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರವೀಣ್ ಹುಟ್ಟಿದ್ದು ಹೆಣ್ಣಾದರೂ ಗಂಡಾಗಿ ಇರಬೇಕೆಂಬ ಆಸೆಯಾಗಿತ್ತು. ಇದಕ್ಕೂ ಮೊದಲು ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದರು, ಬಳಿಕ ತನಗೆ ತಾನು ಸಮಾಧಾನ ಮಾಡಿಕೊಂಡು ದೇಹದ ರೂಪಾಂತರ ಮಾಡಿಕೊಂಡಿದ್ದರು.