ವಿಟ್ಲ | ಯುವಕ ಅನಾರೋಗ್ಯದಿಂದ ನಿಧನ

Prasthutha|

- Advertisement -

ವಿಟ್ಲ: ಕೆಲಿಂಜದ ಯುವಕ ಅನಾರೋಗ್ಯದಿಂದ ಮೃತಪಟ್ಟ ಘಟನೆ ಅರಸೀಕೆರೆಯಲ್ಲಿ ನಡೆದಿದೆ.

ಕೆಲಿಂಜ ಪಾತ್ರತೋಟ ನಿವಾಸಿ ಶರೀಫ್ (34)ಮೃತಪಟ್ಟರು ಎಂದು ಗುರುತಿಸಲಾಗಿದೆ.

- Advertisement -

ಶರೀಫ್ ಕಳೆದ ಕೆಲ ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.

ಶರೀಫ್ ಕುಟುಂಬಸ್ಥರ ಜೊತೆ ಜಾವಗಲ್ ದರ್ಗಾಕ್ಕೆ ತೆರಳಿದ್ದರು ಎನ್ನಲಾಗಿದೆ. ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ನಂತರ ಅವರನ್ನು ಅರಸೀಕೆರೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಈ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಶರೀಫ್ ಅವರ ಧಪನ ಕಾರ್ಯ ಕೆಲಿಂಜ‌ ಮಸೀದಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

ಶರೀಫ್ ಕೆಲಿಂಜ ಅವರು SKSSF ಹಾಗೂ ಸಮಸ್ತದ ಚಟುವಟಿಕೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸಕ್ರಿಯ ಕಾರ್ಯಕರ್ತರಾಗಿದ್ದರು.