ಏಪ್ರಿಲ್ 10- 12ರೊಳಗೆ ಕರ್ನಾಟಕ ಚುನಾವಣೆ: ಯಡಿಯೂರಪ್ಪ

Prasthutha|

ಬೆಂಗಳೂರು: ಇದೇ ಏಪ್ರಿಲ್ 10- 12ರೊಳಗೆ ಕರ್ನಾಟಕ ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಹಿರಿಯ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

- Advertisement -


ಬಿಜೆಪಿಯು ಒಗ್ಗಟ್ಟಿನ ಬಗ್ಗೆ ಕೆಲವರಲ್ಲಿ ಸಂದೇಹವಿದೆ. ಅದಕ್ಕೇನೂ ಆಗಿಲ್ಲ. ದಲಿತರು, ಮಹಿಳೆಯರ ಸಹಿತ ಮನೆ ಮನೆ ತಿರುಗಿ ಬೆಂಬಲ ಗಟ್ಟಿಗೊಳಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಮಾತನಾಡುತ್ತ ಯಡಿಯೂರಪ್ಪ ಹೇಳಿದರು.


ಕಾಂಗ್ರೆಸ್ ಗೆಲ್ಲುವುದೆಂದರೆ ಹಣ, ಬಾಹುಬಲ, ಕೋಮು ರಾಜಕೀಯದಿಂದ. ಆ ಕಾಲ ಈಗಿಲ್ಲ. ಬಿಜೆಪಿಯು 130ರಿಂದ 140 ಸ್ಥಾನ ಗೆಲ್ಲುತ್ತದೆ ಎಂದೂ ಅವರು ಹೇಳಿದರು.
ನಿಮ್ಮ ನಾಯಕ ರಾಹುಲ್ ಗಾಂಧಿಯಾದರೆ ನಮ್ಮ ನಾಯಕರು ಮಹಾ ಬಲಶಾಲಿಗಳಾದ ಮೋದಿ ಶಾ ಎಂಬುದು ಯಡಿಯೂರಪ್ಪ ಹೇಳಿದರು.

- Advertisement -


ಸಂಸದೀಯ ಮಂಡಳಿಯ ಸದಸ್ಯರಾದ ಯಡಿಯೂರಪ್ಪನವರು ಬೆಂಗಳೂರಿನಲ್ಲಿ ಪಕ್ಷದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್, ಪ್ರಹ್ಲಾದ ಜೋಶಿ, ಸದಾನಂದ ಗೌಡ, ಜಗದೀಶ ಶೆಟ್ಟರ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp