ಸ್ಥಳೀಯಾಡಳಿತ ಚುನಾವಣೆ | ಕೇರಳದಲ್ಲಿ ಎಡ ಮೈತ್ರಿಕೂಟಕ್ಕೆ ಭಾರೀ ಮುನ್ನಡೆ; ಎನ್ ಡಿಎ ಸ್ಥಿತಿ ಏನು ಗೊತ್ತಾ? ಇಲ್ಲಿದೆ ವಿವರ…

Prasthutha|

ತಿರುವನಂತಪುರಂ : ಕೇರಳದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಇಂದು ಬಿರುಸಿನಿಂದ ನಡೆಯುತ್ತಿದ್ದು, ಈ ವರೆಗೆ ಲಭ್ಯವಾದ ಮಾಹಿತಿಗಳ ಪ್ರಕಾರ ಆಡಳಿತಾರೂಢ ಎಡಪಕ್ಷಗಳ ಮೈತ್ರಿಕೂಟವು ಮುನ್ನಡೆಯಲಿದೆ.

- Advertisement -

ಸುಮಾರು 941 ಗ್ರಾಮ ಪಂಚಾಯತ್ ಗಳಲ್ಲಿ 402ರಲ್ಲಿ ಎಲ್ ಡಿಎಫ್ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ 343 ಸ್ಥಾನಗಳಲ್ಲಿ ಪೈಪೋಟಿ ನಡೆಸುತ್ತಿದೆ.

ಎನ್ ಡಿಎ ಮೈತ್ರಿಕೂಟದ 30 ಅಭ್ಯರ್ಥಿಗಳು ಮಾತ್ರ ಮುನ್ನಡೆ ಸಾಧಿಸಿದ್ದಾರೆ. ಇತರರು 44 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.

- Advertisement -

941 ಗ್ರಾಮ ಪಂಚಾಯತ್ ಗಳು, 152 ಬ್ಲಾಕ್ ಪಂಚಾಯತ್ ಗಳು, 14 ಜಿಲ್ಲಾ ಪಂಚಾಯತ್ ಗಳು, 86 ಮುನ್ಸಿಪಾಲಿಟಿಗಳು ಮತ್ತು ಆರು ಕಾರ್ಪೊರೇಶನ್ ಗಳ ಮತ ಎಣಿಕೆ ನಡೆಯುತ್ತಿದೆ.

2015ರ ಸ್ಥಳೀಯಾಡಳಿತ ಚುನಾವಣೆಯಲ್ಲಿ ಎಲ್ ಡಿಎಫ್ ಹೆಚ್ಚಿನ ಸ್ಥಾನಗಳನ್ನು ಗಳಿಸಿತ್ತು.  

Join Whatsapp