ಕೇರಳದಲ್ಲಿ ಈ ಬಾರಿ ವಿಜಯ ಪತಾಕೆ ಹಾರಿಸುವವರಾರು? ಆರಂಭಿಕ ಎಣಿಕೆಯಲ್ಲಿ ಎಲ್ ಡಿಎಫ್ ಗೆ ಮುನ್ನಡೆ, ಯುಡಿಎಫ್ ಗೆ ಅಗ್ನಿ ಪರೀಕ್ಷೆ!

Prasthutha|

ತಿರುವನಂತಪುರ: ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರ ಹಂಚಿಕೆಯ ನಾಲ್ಕು ದಶಕಗಳ ಚಿತ್ರಣವನ್ನು ಈ ಬಾರಿ ಎಡ ಪ್ರಜಾಸತ್ತಾತ್ಮಕ ಬಣ(ಯುಡಿಎಫ್) ಮುರಿಯುತ್ತದೆಯೇ ಎಂಬ ಸಂಶಯ ಈ ಬಾರಿ ಆರಂಭಿಕ ಚುನಾವಣಾ ಫಲಿತಾಂಶದಲ್ಲಿ ಕಂಡುಬರುತ್ತಿದೆ.

- Advertisement -

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಅವರ ಸಂಪುಟದ 11 ಸಚಿವರು, ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತಲ, ಹಿರಿಯ ಕಾಂಗ್ರೆಸ್ ಮುಖಂಡ ಊಮ್ಮನ್ ಚಾಂಡಿ, ಮೆಟ್ರೊಮ್ಯಾನ್ ಇ ಶ್ರೀಧರನ್, ಮಾಜಿ ಕೇಂದ್ರ ಸಚಿವ ಕೆ ಜೆ ಅಲ್ಫೊನ್ಸ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಹೀಗೆ ಪ್ರಮುಖರು ಸೇರಿ 140 ಕ್ಷೇತ್ರಗಳಿಗೆ 957 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

2016ರಲ್ಲಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಹೆಚ್ಚಿನ ಸೀಟುಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಕೇರಳದ ಕಾಂಗ್ರೆಸ್ ಅಧ್ಯಕ್ಷ ಜೋಸ್ ಕೆ ಮಣಿ ಅವರಿಗೆ ಈ ಚುನಾವಣೆ ಮುಖ್ಯವಾಗಿದೆ. ಇವರು ದಶಕಗಳ ಕಾಲ ಯುಡಿಎಫ್ ಜೊತೆ ಹೊಂದಿದ್ದ ಮೈತ್ರಿಯನ್ನು ಮುರಿದು ಎಡ ಬಣದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ.

- Advertisement -

ಈ ಬಾರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕೇರಳದಲ್ಲಿ ಬಹಳ ಸಕ್ರಿಯವಾಗಿ ಪ್ರಚಾರ ನಡೆಸಿದ್ದರು. ಹತ್ತಾರು ಸಭೆಗಳು, ರ‍್ಯಾಲಿಗಳಲ್ಲಿ ಭಾಗಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಸತತ ಸೋಲು ಕಾಣುತ್ತಿರುವ ಕಾಂಗ್ರೆಸ್ ಗೆ ಕೇರಳದಲ್ಲಿ ಗೆಲುವಿನ ಭರವಸೆ ಸಿಗಬಹುದೇ?

Join Whatsapp