ಕರ್ನಾಟಕ ಉಪಚುನಾವಣೆ : ಬೆಳಗಾವಿ ಲೋಕಸಭೆಯಲ್ಲಿ ಯಾರು ? ವಿಧಾನಸಭಾ ಉಪಚುನಾವಣೆಯಲ್ಲಿ ಯಾವ ಪಕ್ಷಗಳು ಎಲ್ಲೆಲ್ಲಿ ಮುನ್ನಡೆ ?

Prasthutha|

ಕರ್ನಾಟಕದ ಬೆಳಗಾವಿ ಲೋಕಸಭೆ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ. ಇತ್ತೀಚೆಗಿನ ವರದಿಗಳ ಪ್ರಕಾರ ಬೆಳಗಾವಿ ಲೋಕಸಭಾ ಚುನಾವಣೆಯ 24 ನೇ ಸುತ್ತಿನ ಮತ ಎಣಿಕೆ ಪೂರ್ತಿಗೊಂಡಿದ್ದು, ಬಿಜೆಪಿಯ ಮಂಗಳಾ ಅಂಗಡಿಯವರು 92776 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ಸಿನ ಸತೀಶ್ ಜಾರಕಿಹೊಳಿ 86690 ಮತಗಳನ್ನು ಪಡೆದು ಹಿನ್ನಡೆಯಲ್ಲಿದ್ದಾರೆ.

- Advertisement -

ಅದೇ ರೀತಿ ಬಸವ ಕಲ್ಯಾಣ ವಿಧಾನಸಭಾ ಸ್ಥಾನದ ಉಪಚುನಾವಣೆಯಲ್ಲಿ 7ನೇ ಸುತ್ತಿನ ಮತ ಎಣಿಕೆಯ ಬಳಿಕ ಬಿಜೆಪಿಯ ಶರಣು ಸಲಗರ ಅವರು 22063 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ಸಿನ ಮಾಲಾ ಅವರು 14097 ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಜೆಡಿಎಸ್ ನ ಸಯ್ಯೆದ್ ಅಲಿ ಅವರು 2488 ಮತಗಳನ್ನು ಪಡೆದು ಮೂರನೆ ಸ್ಥಾನದಲ್ಲಿದ್ದಾರೆ.

ಮಸ್ಕಿ ವಿಧಾನಸಭಾ 9ನೇ ಸುತ್ತಿನ ಮತ ಎಣಿಕೆ ಕೊನೆಗೊಂಡಾಗ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಬಸವನ ಗೌಡ ಅವರು 29366 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದರೆ, ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್ 19942 ಮತಗಳೊಂದಿಗೆ ಹಿನ್ನಡೆ ಸಾಧಿಸಿದ್ದಾರೆ.

Join Whatsapp