ರಾಮ್‌ದೇವ್ ವಿರುದ್ಧ ಪ್ರಕರಣ ದಾಖಲಿಸಿದ ಕೇರಳ ಔಷಧಿ ನಿಯಂತ್ರಣ ಇಲಾಖೆ

Prasthutha|

ತಿರುವನಂತಪುರಂ: ಕೇರಳ ಔಷಧಿ ನಿಯಂತ್ರಣ ಇಲಾಖೆ ಯೋಗಗುರು ರಾಮ್‌ದೇವ್ ಮತ್ತು ಅವರ ಕಂಪನಿ ದಿವ್ಯಾ ಫಾರ್ಮಸಿ ವಿರುದ್ಧ ಕೊಝಿಕ್ಕೋಡ್‌ನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಮಲಯಾಳಂ ಮತ್ತು ಇಂಗ್ಲಿಷ್ ವೃತ್ತಪತ್ರಿಕೆಗಳಲ್ಲಿ ‘ತಪ್ಪುದಾರಿಗೆಳೆಯುವ ‘ಜಾಹೀರಾತುಗಳನ್ನು ಪ್ರಕಟಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದೆ. ಪತಂಜಲಿ ಆಯುರ್ವೇದ್‌ನ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

- Advertisement -

ಕೊಝಿಕ್ಕೋಡ್‌ನ ಸಹಾಯಕ ಔಷಧಿ ನಿಯಂತ್ರಕರ ಕಚೇರಿಯ ಡ್ರಗ್ಸ್ ಇನ್ಸ್‌ಪೆಕ್ಟರ್ ಅಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಈ ದೂರನ್ನು ಸಲ್ಲಿಸಿದ್ದಾರೆ.

ದಿವ್ಯ ಫಾರ್ಮಸಿ ಲೈಂಗಿಕ ದೌರ್ಬಲ್ಯ ಮತ್ತು ಮಧುಮೇಹವನ್ನು ಗುಣಪಡಿಸುತ್ತವೆ ಎಂದು ಹೇಳಿಕೊಂಡು ಔಷಧೀಯ ಉತ್ನನ್ನಗಳ ಪ್ರಚಾರ ಮಾಡಿದೆ. ಇವು ‘ಔಷಧಿ ಮತ್ತು ಮಾಂತ್ರಿಕ ಪರಿಹಾರಗಳ ಆಕ್ಷೇಪಾರ್ಹ ಜಾಹೀರಾತುಗಳ ಕಾಯ್ದೆ’ಯಡಿ ಚಿಕಿತ್ಸೆಗಳ ಪ್ರಚಾರವನ್ನು ನಿಷೇಧಿಸಲಾಗಿರುವ 54 ಕಾಯಿಲೆಗಳಲ್ಲಿ ಸೇರಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

ಫೆಬ್ರವರಿ 2022ರಲ್ಲಿ ಕಣ್ಣೂರಿನ ನೇತ್ರತಜ್ಞ ಕೆ.ವಿ. ಬಾಬು ದಿವ್ಯ ಫಾರ್ಮಸಿ ವಿರುದ್ಧ ದೂರು ಸಲ್ಲಿಸಿದ್ದರು.ಇದನ್ನನುಸರಿಸಿ ಕೇರಳ ಔಷಧಿ ನಿಯಂತ್ರಣ ಇಲಾಖೆಯು ತನಿಖೆಗೆ ಆದೇಶಿಸಿತ್ತು. ಫಾರ್ಮಸಿಯು ಕಾಯ್ದೆಯನ್ನು ಉಲ್ಲಂಘಿಸಿದ್ದ ಹಲವಾರು ನಿದರ್ಶನಗಳು ತನಿಖೆಯಲ್ಲಿ ಬೆಳಕಿಗೆ ಬಂದಿದ್ದವು.

Join Whatsapp