ಕೇರಳ: ನೋಡ ನೋಡುತ್ತಿದ್ದಂತೆ ಮಾವುತನನ್ನು ಸಾಯಿಸಿದ ಆನೆ!

Prasthutha|

ತಿರುವನಂತಪುರಂ: ಆನೆಯೊಂದು ನೋಡ ನೋಡುತ್ತಿದ್ದಂತೆ ಮಾವುತನನ್ನು ತುಳಿದು ಸಾಯಿಸಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ವೈಕೋಂ ತಾಲ್ಲೂಕಿನ ಟಿವಿ ಪುರಂನಲ್ಲಿರುವ ಶ್ರೀರಾಮ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆದಿದೆ.

- Advertisement -

ಅರವಿಂದ್ (26) ಮೃತ ಮಾವುತ. ಆನೆ ಮಾವುತನನ್ನು ತುಳಿದು ಸಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕುಂಜುಲಕ್ಷ್ಮೀ ಎಂಬ ಹೆಸರಿನ ಆನೆಗೆ ದೇವರ ಉತ್ಸವದ ಅಂಗವಾಗಿ ನೆಟ್ಟಿಪಟ್ಟಿಯನ್ನು ಕಟ್ಟಲಾಗುತ್ತಿತ್ತು. ಆದರೆ ನೋಡ ನೋಡುತ್ತಿದ್ದಂತೆ ಮದವೇರಿ ಮೇಲಕ್ಕೆ ಎದ್ದ ಆನೆ ಮಾವುತ ಅರವಿಂದ್​ನನ್ನು ಕೆಳಗೆ ಹಾಕಿ ಹೊಸಕಿ ಹಾಕಿದೆ. ಇದನ್ನು ನೋಡಿದ ಮತ್ತೋರ್ವ ಮಾವುತ ಆನೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.

- Advertisement -

ಆದರೆ ಗಾಯಾಳುವನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

Join Whatsapp