ಕೇಜ್ರಿವಾಲ್ ಆಡಳಿತದ ಮಾದರಿ ದೇಶಾದ್ಯಂತ ಅಗತ್ಯ ಇದೆ: ಭಾಸ್ಕರ್ ರಾವ್

Prasthutha|

ನವದೆಹಲಿ: ದೇಶಾದ್ಯಂತ ಅರವಿಂದ ಕೇಜ್ರಿವಾಲ್ ಅವರ‌ ಆಡಳಿತದ ಮಾದರಿಯ ಅಗತ್ಯ ಇದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಬಿ. ಭಾಸ್ಕರ್ ರಾವ್ ಹೇಳಿದರು.

- Advertisement -

ಆಮ್ ಆದ್ಮಿ ಪಕ್ಷ ಸೇರ್ಪಡೆ ಬಳಿಕ ಪತ್ರಿಕಾಗೋಷ್ಢಿಯಲ್ಲಿ ಮಾತನಾಡಿದ ಅವರು, ಎಎಪಿ ಮಾದರಿ ಆಡಳಿತ ಎಲ್ಲೆಡೆ ಇರಬೇಕು ಎಂಬ ಅಭಿಲಾಷೆಯೊಂದಿಗೆ‌ ನಾನು ನೌಕರಿಗೆ ರಾಜೀನಾಮೆ ನೀಡಿ ಪಕ್ಷ‌ ಸೇರಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ಸತತ 32 ವರ್ಷ ಕೆಲಸ ಮಾಡಿದ್ದರೂ ದೆಹಲಿಯನ್ನು ಹತ್ತಿರದಿಂದ ನೋಡಿರಲಿಲ್ಲ. ಕೆಲವು ದಿನಗಳ ಹಿಂದೆ ಇಲ್ಲಿನ ಸರ್ಕಾರಿ ಶಾಲೆ‌ಯ ಗುಣಮಟ್ಟ ನೋಡಿ, ಜನಸಾಮಾನ್ಯರಿಗೆ‌ ದೊರೆತ ಭದ್ರತೆ ನೋಡಿ ಪಕ್ಷ ಸೇರಿದ್ದೇನೆ ಎಂದು ತಿಳಿಸಿದರು.

ಕೇಜ್ರಿವಾಲ್ ಅವರ ಕಾರ್ಯವೈಖರಿ, ವಿಕೇಂದ್ರೀಕರಣ ನೀತಿ,  ಜನಸಾಮಾನ್ಯರ ಜೀವನದಲ್ಲಿ ಬದಲಾವಣೆ‌ ತಂದಿದ್ದನ್ನು ನೋಡಿದರೆ, ದೇಶದೆಲ್ಲೆಡೆ ಆ ವ್ಯವಸ್ಥೆ ಇರಬೇಕು ಎಂಬುದು ನಮ್ಮ ಆಶಯ. ಕರ್ನಾಟಕ ಪ್ರಗತಿಶೀಲ ರಾಜ್ಯ.  ಆದರೂ ಅಲ್ಲಿ ಉತ್ತಮ ಆಡಳಿತ ಇಲ್ಲ. ಆಡಳಿತದಲ್ಲಿ ಬದಲಾವಣೆ ಬಂದಲ್ಲಿ ಒಳ್ಳೆಯದು.  ವಿಶ್ವಸಂಸ್ಥೆಯ ಪ್ರಗತಿಶೀಲ, ಸ್ವಚ್ಛ ಆಡಳಿತದ ಸರ್ಕಾರಗಳ ಪಟ್ಟಿಯಲ್ಲಿ ದೆಹಲಿ ಹಾಗೂ ಎಎಪಿ ಇದೆ ಎಂದು ಹೇಳಿದರು.

Join Whatsapp