ಮೀರತ್: ನಾನ್ ವೆಜ್ ಬಿರಿಯಾನಿ ಮಾರಾಟದ ಆರೋಪ; ಸಂಘಪರಿವಾರದಿಂದ ಸ್ಟಾಲ್ ದ್ವಂಸ !

Prasthutha|

ಮೀರತ್: ನಾನ್ ವೆಜ್ ಬಿರಿಯಾನಿ ಮಾರಾಟದ ಆರೋಪ ಹೊರಿಸಿ ಸಂಘಪರಿವಾರದ ಕಾರ್ಯಕರ್ತರು, ಶಾಹಿದ್ ಎಂಬ ಮುಸ್ಲಿಮ್ ವ್ಯಕ್ತಿಯ ಸ್ಟಾಲ್ ಅನ್ನು ದ್ವಂಸಗೈದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

- Advertisement -

ಶಾಹೀದ್ ಎಂಬಾತ ತನ್ನ ಸ್ಟಾಲ್ ನಲ್ಲಿ ವೆಜ್ ಬಿರಿಯಾನಿ ಮಾರಾಟ ಮಾಡುತ್ತಿದ್ದು, ಬಿಜೆಪಿ ನಾಯಕ ಸಂಗೀತ ಸೋಮ್ ಬೆಂಬಲಿಗರು ನಾನ್ ವೆಜ್ ಬಿರಿಯಾನಿ ಆರೋಪ ಹೊರಿಸಿ ಆತನ ಸ್ಟಾಲ್ ಗೆ ದಾಳಿ ನಡೆಸಿ ದ್ವಂಸ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಂಘಪರಿವಾರದ ಕಾರ್ಯಕರ್ತರು ದಾಂಧಲೆ ನಡೆಸಿ ಪುಡಿಗೈಯ್ಯುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

Join Whatsapp