ಯೂಸುಫ್ ಷರೀಫ್ ಕರ್ನಾಟಕದ ಅತ್ಯಂತ ಶ್ರೀಮಂತ ರಾಜಕಾರಣಿ !

Prasthutha|

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ‘ಜನಸಾಮನ್ಯರಲ್ಲ’ ಬದಲಾಗಿ ಕೋಟಿ.. ಕೋಟಿ ಆಸ್ತಿಹೊಂದಿರುವ ಕುಬೇರರು. ಈ ಪೈಕಿ  ಬೆಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಕೋಲಾರ ಮೂಲದ ಯೂಸುಫ್ ಷರೀಫ್ ಅತ್ಯಂತ ಶ್ರೀಮಂತ ವ್ಯಕ್ತಿ. KGFಬಾಬು  ಹೆಸರಿನಿಂದ ಗುರುತಿಸಿಕೊಂಡಿರುವ ಯೂಸುಫ್ ಷರೀಫ್ ಆಸ್ತಿ ಮೌಲ್ಯ 1,743 ಕೋಟಿ ರುಪಾಯಿ !

- Advertisement -

ಇಲ್ಲಿಯವರೆಗೆ ರಾಜ್ಯದ ಚುನಾವಣೆಯ ಇತಿಹಾಸದಲ್ಲಿ ಹೊಸಕೋಟೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಎಂಟಿಬಿ ನಾಗರಾಜ್‌ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದರು. 2019ರಲ್ಲಿ ನಡೆದ ಉಪ ಚುನಾವಣೆಯ ಸಂದರ್ಭದಲ್ಲಿ ಎಂಟಿಬಿ 1200 ಕೋಟಿ ರೂ. ಆಸ್ತಿ ಘೋಷಿಸಿದ್ದರು. ಈಗ ಎಂಟಿಬಿ ಹೆಸರಿನಲ್ಲಿದ್ದ ‘ಶ್ರೀಮಂತ ಅಭ್ಯರ್ಥಿ’ ದಾಖಲೆಯನ್ನು ಯೂಸುಫ್ ಷರೀಫ್ (ಕೆಜಿಎಫ್ ಬಾಬು) ತಮ್ಮ ಹೆಸರಿಗೆ ಬದಲಾಯಿಸಿದ್ದಾರೆ.

5ನೇ ತರಗತಿಯವರೆಗೆ ಓದಿರುವ ಯೂಸೂಫ್ ಷರೀಫ್‌’ರಿಗೆ ತಾಜ್‌ ಅಬ್ದುಲ್‌ ರಜಾಕ್, ಶಾಜಿಯಾ ತರನ್ನಮ್ ಹೆಸರಿನ ಇಬ್ಬರು ಪತ್ನಿಯರಿದ್ದು, ಐವರು ಮಕ್ಕಳಿದ್ದಾರೆ. ನಾಮಪತ್ರದ ಜೊತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಯೂಸೂಫ್ ಷರೀಫ್‌ ಸಲ್ಲಿಸಿರುವ ಚರಸ್ತಿ ಮತ್ತು ಸ್ಥಿರಾಸ್ತಿ ವಿವರ ಈ ಕೆಳಗಿನಂತಿದೆ.

- Advertisement -

97.98 ಕೋಟಿ ರೂ. ಮೌಲ್ಯದ ಚರಾಸ್ತಿ, 1.643.59 ಕೋಟಿ ಮೌಲ್ಯದ ಸ್ಥಿರಾಸ್ತಿ, ಇಬ್ಬರು ಪತ್ನಿಯರ ಪೈಕಿ, ಮೊದಲ ಪತ್ನಿಯ ಬಳಿ 98.96 ಕೋಟಿ ರು. ಮೌಲ್ಯದ ಚರಾಸ್ತಿ, 1.07 ಕೋಟಿ ಮೌಲ್ಯದ ಸ್ತಿರಾಸ್ತಿ, ಎರಡನೇ ಪತ್ನಿ ಬಳಿ 32.22 ಲಕ್ಷ ಮೌಲದ್ಯ ಚರಾಸ್ತಿ ಇದೆ. ಜೊತೆಗೆ ತಮಗೆ 64.24 ಕೋಟಿ ರು. ಸಾಲವಿದೆ ಎಂದು ಘೋಷಿಸಿದ್ದಾರೆ.

ಚರಾಸ್ತಿ ವಿವರ

2.01 ಕೋಟಿ ರೂ. ಮೌಲ್ಯದ ರೋಲ್ಸ್‌ರಾಯ್ಸ್ ಕಾರು ಹಾಗೂ ಇಬ್ಬರು ಪತ್ನಿಯರ ಬಳಿ ತಲಾ 49 ಲಕ್ಷ ರೂ. ಮೌಲ್ಯದ ಎರಡು ಫಾರ್ಚೂನರ್ ಕಾರು ಅಲ್ಲದೇ 97.98 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಘೋಷಿಸಿದ್ದಾರೆ. 4.8 ಕೆ.ಜಿ ಚಿನ್ನಾಭರಣ ಹಾಗೂ 1.10 ಕೋಟಿ ರೂ. ಮೌಲ್ಯದ ವಾಚ್ ಸೇರಿದಂತೆ ದುಬಾರಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕೈಯಲ್ಲಿ 19.53 ಲಕ್ಷ ರೂ. ನಗದು, ಬ್ಯಾಂಕ್‌ಗಳಲ್ಲಿ 16.87 ಕೋಟಿ ರೂ. ಠೇವಣಿ, 17.61 ಕೋಟಿ ರೂ. ಹೂಡಿಕೆ, 58.10 ಕೋಟಿ ರೂ. ವೈಯಕ್ತಿಕ ಸಾಲ ಮಾಡಿದ್ದಾರೆ. ತಮ್ಮ ಬಳಿ 73 ಲಕ್ಷ ರೂ. ಮೌಲ್ಯದ 1.51 ಕೆ.ಜಿ ಚಿನ್ನಾಭರಣ, ಮೊದಲ ಪತ್ನಿಯ ಬಳಿ 75.89 ಲಕ್ಷ ರೂ. ಮೌಲ್ಯದ 1.56 ಕೆ.ಜಿ ಚಿನ್ನಾಭರಣ, ಎರಡನೇ ಪತ್ನಿ ಬಳಿ 29.19 ಲಕ್ಷ ರೂ. ಮೌಲ್ಯದ 600 ಗ್ರಾಂ. ಚಿನ್ನ, ಪುತ್ರಿ ಬಳಿ 57.40 ಲಕ್ಷ ರೂ. ಮೌಲ್ಯದ 1.18 ಕೆ.ಜಿ. ಚಿನ್ನ ಇರುವುದಾಗಿ ಉಲ್ಲೇಖಿಸಿದ್ದಾರೆ.

ಬಾಂಡ್, ಷೇರುಗಳು, ಮ್ಯೂಚುವಲ್ ಫಂಡ್‌ಗಳಲ್ಲಿ ಷರೀಫ್ 17.62 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಮೊದಲ ಪತ್ನಿ 1.60 ಲಕ್ಷ ರೂ., ಎರಡನೇ ಪತ್ನಿ 75 ಸಾವಿರ ಹೂಡಿಕೆ ಮಾಡಿದ್ದಾರೆ. 5 ಕಟ್ಟಡ ನಿರ್ಮಾಣ ಸಂಸ್ಥೆಗಳಲ್ಲಿ 17.61 ಕೋಟಿ ರೂ. ಹೂಡಿಕೆ ಮಾಡಿದ್ದಾರೆ ಎಂದು ನಾಮಪತ್ರದ ಆಸ್ತಿ ಪ್ರಮಾಣ ಪತ್ರದಲ್ಲಿ ಘೋಷಿಸಿದ್ದಾರೆ.

ಸ್ಥಿರಾಸ್ತಿ ವಿವರ

ಬೆಂಗಳೂರಿನಲ್ಲಿ ನೂರಾರು ಎಕರೆ ಕೃಷಿ ಹಾಗೂ ಕೃಷಿಯೇತರ ಜಮೀನು ಹೊಂದಿರುವ ಯೂಸೂಫ್ ಷರೀಫ್ ತಮ್ಮ ಹೆಸರಿನಲ್ಲೇ 47.31 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು ಹಾಗೂ ಪತ್ನಿಯ ಹೆಸರಿನಲ್ಲಿ 1.30 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು ಹೊಂದಿದ್ದಾರೆ. ಅಷ್ಟೇ ಅಲ್ಲದೇ 1,593.27 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, ಬೆಂಗಳೂರಿನಲ್ಲಿ 3.01 ಕೋಟಿ ರೂ. ಮೌಲ್ಯದ ವಸತಿ ಕಟ್ಟಡ ಹೊಂದಿದ್ದು, ಒಟ್ಟು 67.24 ಕೋಟಿ ರೂ. ಸಾಲ ಹೊಂದಿರುವುದಾಗಿ ಪ್ರಮಾಣ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. 

ಬೆಂಗಳೂರಿನ ಯಲಹಂಕ, ನ್ಯೂಟೌನ್, ಜಯನಗರ, ಹಲಸೂರು ಮತ್ತು ಕಾಟನ್’ಪೇಟೆ ಪೊಲೀಸ್ ಠಾಣೆಗಳಲ್ಲಿ ಯೂಸೂಫ್ ಷರೀಫ್ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಬಾಲಿವುಡ್‌’ನ ಖ್ಯಾತ ನಟ ಅಮಿತಾಭ್‌ ಬಚ್ಚನ್‌ರಿಂದ ಯೂಸೂಫ್ ಷರೀಫ್ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದಾರೆ.

Join Whatsapp