ಕೋವಿಡ್ ಸಾಂಕ್ರಾಮಿಕದ ಮಧ್ಯೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಎರಡು ಪರೀಕ್ಷೆಗಳನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಜುಲೈ 19 ಮತ್ತು 22ರಂದು ಕೋರ್ ಸಬ್ಜೆಕ್ಟ್ ಪರೀಕ್ಷೆ ನಡೆಯಲಿದೆ.
ಪ್ರಾಥಮಿಕ ಮತ್ತು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜುಲೈ 19 ರಂದು ಸೋಮವಾರ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳು ಹಾಗೂ ಜುಲೈ 22 ರಂದು ಗುರುವಾರ – ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಪರೀಕ್ಷಾ ಸಮಯ ನಿಗದಿಪಡಿಸಲಾಗಿದೆ ಎಂದರು.
ಬಹು ಆಯ್ಕೆಗಳ ಪ್ರಶ್ನೆಗಳ ಪತ್ರಿಕೆ ಇರಲಿದ್ದು, ಪರೀಕ್ಷಾ ಕೇಂದ್ರಗಳನ್ನು ಮಕ್ಕಳ ಆರೋಗ್ಯ ಸುರಕ್ಷಾ ಕೇಂದ್ರಗಳಾಗಿ ಪರಿವತ೯ನೆ ಮಾಡಲಾಗಿದೆ. ಈ ವಷ೯ ರಾಜ್ಯದಲ್ಲಿ 8.76 ಲಕ್ಷ ವಿದ್ಯಾಥಿ೯ಗಳಿಗೆ 73,066 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
ಈ ವಷ೯ ಎರಡೇ ದಿನಕ್ಕೆ ಪರೀಕ್ಷೆ ಸೀಮಿತವಾಗಿದ್ದು, ಜುಲೈ 19 ಮತ್ತು 22 ರಂದು 3 ಗಂಟೆ ಅವಧಿಯಲ್ಲಿ ತಲಾ 3 ವಿಚಾರಗಳಿಗೆ ಪರೀಕ್ಷೆ ಬರೆಯಬೇಕಾಗಿದೆ ಎಂದು ಹೇಳಿದರು.