ದಿ ನ್ಯೂಸ್ ಪೇಪರ್ಸ್ ಅಸೋಷಿಯೇಷನ್ ನಿಂದ HDD, BSY, ಹೊರಟ್ಟಿ ಸೇರಿ 10 ಮಂದಿಗೆ ಕರ್ನಾಟಕ ರತ್ನ

Prasthutha|

►ಪತ್ರಕರ್ತ ನಂಜುಂಡಪ್ಪ.ವಿ. ಸೇರಿ 66 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ

- Advertisement -

ಬೆಂಗಳೂರು; ದಿ ನ್ಯೂಸ್ ಪೇಪರ್ಸ್ ಅಸೋಷಿಯೇಷನ್ ಕರ್ನಾಟಕದಿಂದ  ವಿವಿಧ ವಲಯಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ರಾಜಕಾರಣದ ಪಿತಾಮಹ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ,  ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವೈದೇಹಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷೆ ದಿ. ಡಾ. ಡಿ.ಕೆ. ಆದಿಕೇಶವಲು, ಡಾ. ಸಿ.ಎನ್. ಮಂಜುನಾಥ್ ಸೇರಿ ಹತ್ತು ಮಂದಿಗೆ ಕರ್ನಾಟಕ ರತ್ನ, ನಟರಾದ ರವಿಚಂದ್ರನ್, ರಮೇಶ್ ಅರವಿಂದ್, ಪತ್ರಕರ್ತ, ನಿರೂಪಕ ನಂಜುಂಡಪ್ಪ.ವಿ. ಸೇರಿ 66 ಮಂದಿಗೆ 2021 ರ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ. 

ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಆವರಣ – ಬಿಎಂಸಿ ಸಭಾಂಗಣದಲ್ಲಿ ಡಿಸೆಂಬರ್ 26 ರಂದು ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ದಿ ನ್ಯೂಸ್ ಪೇಪರ್ಸ್ ಅಸೋಷಿಯೇಷನ್ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಶ್ರಾವಣ ಲಕ್ಷ್ಮಣ ತಿಳಿಸಿದ್ದಾರೆ.

- Advertisement -

ಡಾ ಆದಿಕೇಶವಲು, ಚಲನಚಿತ್ರ ನಿರ್ಮಾಪಕ ದಿವಂಗತ ವೀರಸ್ವಾಮಿ, ದಯಾನಂದ್ ಸಾಗರ್ ಸಂಸ್ಥೆಯ ಆರ್. ದಯಾನಂದ್ ಸಾಗರ್ ಅವರಿಗೆ ಮರಣೋತ್ತರವಾಗಿ  ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ.

 ಪರಿಸರ ಮತ್ತು ಸಮಾಜ ಸೇವಾ ವಲಯದಲ್ಲಿ ಪದ್ಮಶ್ರೀ ತುಳಸಿ ಗೌಡ, ಪದ್ಮಶ್ರೀ ಬಿ. ಮಂಜಮ್ಮ ಜೋಗತಿ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ಸಿ.ಎನ್. ಮಂಜುನಾಥ್, ಶಿಕ್ಷಣ ಮತ್ತು ಸಮಾಜ ಸೇವಾ ವಲಯದಲ್ಲಿ ಡಾ. ಎಂ.ಆರ್.‍ ಜಯರಾಂ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ.

 ಸಮಾಜ ಸೇವಾ ಕ್ಷೇತ್ರದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಡಾ.ಟಿ.ಎ. ಸರವಣ, ಮಾಜಿ ಮಹಾಪೌರ ಬಿ.ಎಸ್. ಸತ್ಯನಾರಾಯಣ [ಕಟ್ಟೆ ಸತ್ಯ].  ಮಾಜಿ ಉಪ ಮಹಾಪೌರ ಎಸ್. ಹರೀಶ್,  ಪರೋಪಕಾರಿ ಎಂ.ಶ್ರೀನಿವಾಸ್, ಸಮರ್ಥನಂ ಸಂಸ್ಥೆಯ ಡಾ. ಮಹಾಂತೇಶ್ ಜಿ. ಕಿವಡಸಣ್ಣವರ್, ಉಡುಪಿಯ ರವಿ ಕಟಪಾಡಿ, ಬಿ.ಬಿ.ಎಂ.ಪಿ ಮಾಜಿ ಸದಸ್ಯ ಎಂ.ಎ. ಕೃಷ್ಣ ರೆಡ್ಡಿ, ಬಿಜೆಪಿ ನಾಯಕ ಮಿರ್ಲೆ ವರದರಾಜ್, ಸಿವಿಲ್ ಇಂಜಿನಿಯರ್ ವಿ. ಹರಿರೆಡ್ಡಿ ಮತ್ತು ವಾಸ್ತುಶಾಸ್ತ್ರಜ್ಞ ಸಾಮ್ರಾಟ್ ಗಿರಿಧರ್ ರಾಜು ಅವರಿಗೆ ಪ್ರಶಸ್ತಿ ಲಭಿಸಿದೆ.

ಪತ್ರಿಕೋದ್ಯಮ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಪತ್ರಕರ್ತ ಮತ್ತು ನಿರೂಪಕ ನಂಜುಂಡಪ್ಪ.ವಿ, ಪ್ರಜಾವಾಣಿಯ  ವಿಶೇಷ ವರದಿಗಾರ ಆರ್. ಮಂಜುನಾಥ್ [ಕೆರೆ ಮಂಜು]. ಮಾಧ್ಯಮ ವಲಯದ ಗೌರಿಶ್ ಅಕ್ಕಿ.ಶಿಕ್ಷಣ ಕ್ಷೇತ್ರದಲ್ಲಿ ಬೆಂಗಳೂರು ವಿವಿ ಕುಲಪತಿ ಡಾ.ಕೆ.ಆರ್. ವೇಣುಗೋಪಾಲ್, ಹುಕ್ಕೇರಿಯ ಮಹಾವೀರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾವೀರ ವಸಂತ ನಿಲಜಗಿ, ಪರಿಶ್ರಮ್ ನೀಟ್ ಅಕಾಡೆಮಿಯ ಎಂ.ಡಿ. ಪ್ರದೀಪ್ ಈಶ್ವರ್, ಬಳ್ಳಾರಿಯ ಮೇಧಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ರಾಮ್ ಕಿರಣ್, ಬೆಂಗಳೂರು ಬಾಲ್ಡ್ ವಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಟಿ. ವೇಣುಗೋಪಾಲ್, ಕೃಷ್ಣಾ ಇಂಟರ್ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ಡಾ. ಸುಕ್ಮಾಂಗದ ನಾಯ್ಡು, ಶಿಲ್ಪ ಕಲಾ ವಿಭಾಗದಲ್ಲಿ ಎಸ್.ಶಿವದತ್ತ, ಕಾಗ್ನಿಟಿಯೋ ಸ್ಕೂಲ್ ಅಧ್ಯಕ್ಷ ರಾಮಾಂಜನೇಯ ಎಸ್.ಆರ್.ಬಿ  ಅವರಿಗೆ ಪ್ರಶಸ್ತಿ ಸಂದಿದೆ. 

ವೈದ್ಯಕೀಯ ಕ್ಷೇತ್ರದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿ.ವಿ. ನಿವೃತ್ತ ಕುಲಪತಿ ಡಾ.ಎಸ್. ಸಚ್ಚಿದಾನಂದ, ಮಂಡ್ಯದ ಆದಿಚುಂಚನಗಿರಿ ವಿ.ವಿ. ಉಪಕುಲಪತಿ ಡಾ. ಎಸ್. ಚಂದ್ರಶೇಖರ್ ಶೆಟ್ಟಿ,  ಚಿಕ್ಕಮಗಳೂರಿನ ಲೈಪ್ ಲೈನ್ ಪೀಡ್ಸ್ ನ ಅಧ್ಯಕ್ಷ ಡಾ. .ಜಿ.ಎಸ್. ಚಂದ್ರಶೇಖರ್ ಕುಂದಾಪುರದ ಚಿತ್ರಕೂಟ ಎಂ.ಡಿ. ಆಯುರ್ವೇದ ತಜ್ಞ ಡಾ. ರಾಜೇಶ್ ಬಾಯರಿ, ಚಿಂತಾಮಣಿಯ ಆರ್.ಕೆ. ನರ್ಸಿಂಗ್ ಹೋಂ ಸಂಸ್ಥಾಪಕ ಡಾ. ಮೆಹಬೂಬ್ ಪಾಶ, ಬಿ.ಬಿ.ಎಂ.ಪಿಯ ನೋಡೆಲ್ ಅಧಿಕಾರಿ ಡಾ. ಸಂಧ್ಯಾ ಜಯಕುಮಾರ್, ಬಿ.ಬಿ.ಎಂ.ಪಿಯ ಹಿರಿಯ ಹಿರಿಯ ಆರೋಗ್ಯ ಪರಿವೀಕ್ಷಕರಾದ ಸುನಂದಮ್ಮ ಪಿ.ಎಂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಹೊರನಾಡ ಕನ್ನಡತಿ ಮತ್ತು ವ್ಯಾಪಾರ, ವಾಣಿಜ್ಯೋದ್ಯಮ ವಲಯದಲ್ಲಿ ರೇಣುಕಮ್ಮಾ ಕರಿಯಪ್ಪ, ವ್ಯಾಪಾರ  ಮತ್ತು ವಾಣಿಜ್ಯೋದಮ ವಲಯದಲ್ಲಿ ಕೆ. ಕಿಶೋರ್ ಕುಮಾರ್, ತಿಮ್ಮಯ್ಯ,  ಶಿಕುಮಾರ್,  ಬೆನಕ ಗೋಲ್ಡ್ ನ ಎಂ.ಡಿ. ಎಸ್. ಭರತ್ ಕುಮಾರ್, ಮಂಗಳುರು  ಕಿಮ್ಸ್ ಸಂಸ್ಥಾಪಕ ಹಾಜಿ. ಯು. ಕೆ. ಮೋನು, ಭವಾನಿ ಕಂಗನ್ ಸ್ಪೋರ್ಸ್ ಮಾಲೀಕ ಕೆ.ಎನ್. ಶ್ರೀನಿವಾಸ ಜೋಗಿ, ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ ನ ಸಂಸ್ಥಾಪಕ ರಾಜೇಂದ್ರ .ವಿ ಶೆಟ್ಟಿ, ಕೆ.ಎನ್. ಗ್ರೂಪ್ ಸಿ.ಇ.ಓ ರಾಜ್ ಕೃಷ್ಣಮೂರ್ತಿ ಎನ್. ಹರ್ಷ ಪೆರಿಕಲ್ ಪೌಂಡೇಷನ್ ನ ಸಹ ಸಂಸ್ಥಾಪಕರಾದ ಶೃತಿ ಹರ್ಷ ಪೆರಿಕಲ್, ತೇಜು ಮಸಾಲ ಸಂಸ್ಥಾಪಕರಾದ ವಿ. ಸುಬ್ರಹ್ಮಣ್ಯ ಮತ್ತು ಎ.ಎಸ್. ಜಯರಾಮ್, ಸ್ಕ್ಯಾನ್ರಿ ಟೆಕ್ನಾಲಜೀಸ್ ಅಧ್ಯಕ್ಷ ವಿಶ್ವ ಪ್ರಸಾದ್ ಆಳ್ವ, ಶಿವಮೊಗ್ಗದ ಶಾಂತಲಾ ಸ್ಪೆರೋಕಾಸ್ಟ್ ಪ್ರವೈಟ್ ಲಿಮಿಟೆಡ್ ಉಪಾಧ್ಯಕ್ಷ ಎಸ್. ರುದ್ರೇಗೌಡ, ಶಿವಮೊಗ್ಗದ ಎಸ್.ಜಿ.ಎಂ ಟೆಕ್ನಾಲಜೀಸ್ ಮಾಲೀಕ ಬಿ.ಆರ್. ಉಮೇಶ್, ಬಳ್ಳಾರಿಯ ಹ್ಯಾಲಿಸ್ ಬ್ಲ್ಯೂ ಸ್ಟೀಲ್ಸ್ ಪ್ರವೈಟ್ ಲಿಮಿಟೆಡ್ ಅಧ್ಯಕ್ಷ ಶಿವಮೂರ್ತಿ ಕೆ.ಎಂ.,

ಚಲನಚಿತ್ರ ವಿಭಾಗದಲ್ಲಿ ಚಲನಚಿತ್ರ ನಟಿ ಶೃತಿ ಕೃಷ್ಣ, ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ. ತೋಟಗಾರಿಕೆ ಕ್ಷೇತ್ರದಲ್ಲಿ ಆನೆಕಲ್  ನ ಸ್ವಾಮಿ ನರ್ಸರಿ ಸಂಸ್ಥಾಪಕ ಡಾ. ಲಯನ್ ಮುನಿರೆಡ್ಡಿ, ಧಾರ್ಮಿಕ  ವಲಯದಲ್ಲಿ ಬಂಡೆ ಮಹಾಕಾಳಿ ದೇವಾಲಯದ ಅದ್ಯಕ್ಷ ಡಾ, ಜಿ.ಆರ್. ಶಿವಪ್ರಕಾಶ್ [ಶಿವಣ್ಣ], ನಿವೃತ್ತ ನೌಕಾಪಡೆಯ ಅಧಿಕಾರಿ ವಿರೂಫಾಕ್ಷಪ್ಪ ವೀರಭದ್ರಪ್ಪ ಗಿಡ್ನವರ್, ನಿರ್ಮಾಣ  ವಲಯದಲ್ಲಿ ಎಂ.ಆರ್. ಕನ್ಸ್ಟ್ರಕ್ಷನ್ ನ ಎನ್. ರಮೇಶ್, ಕರ್ನಾಟಕ ರೈತ ಸಂಘದ [ಸಾವಯವ] ಅಧ್ಯಕ್ಷ ಹಣಮಂತೇಗೌಡ ಜಿ.ಎಚ್. ಅತ್ಯುತ್ತಮ ತಂಡ ವಿಭಾಗದಲ್ಲಿ  ಬೆಂಗಳೂರು ಹುಡುಗರು ತಂಡದ ಸಹ ಸಂಸ್ಥಾಪಕ ವಿನೋದ್ ಕರ್ತವ್ಯ, ಯುವ ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ಶ್ರಾವಣ ಲಕ್ಷ್ಮಣ ತಿಳಿಸಿದ್ದಾರೆ

Join Whatsapp