ಕೋವಿಡ್ ಬಿಕ್ಕಟ್ಟು । ಕರ್ನಾಟಕದ ಶಾಸಕರಿಗೆ ಶೇ. 30ರಷ್ಟು ವೇತನ ಕಡಿತ । ಮಸೂದೆಗೆ ಅಂಗೀಕಾರ

Prasthutha|

ಬೆಂಗಳೂರು : ಕೋವಿಡ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕರ್ನಾಟಕದ ಶಾಸಕರ ಸಂಬಳ ಮತ್ತು ಭತ್ಯೆಯನ್ನು ಶೇ.30 ರಷ್ಟು ಕಡಿತಗೊಳಿಸಲಾಗಿದೆ. ಈ ಮಸೂದೆಗೆ ಕರ್ನಾಟಕ ವಿಧಾನಸಭೆ ಅಂಗೀಕಾರ ನೀಡಿದೆ.. ಸಂಬಳ ಮತ್ತು ಭತ್ಯೆಗಳನ್ನು ಕಡಿತಗೊಳಿಸುವ ಮೂಲಕ ವರ್ಷಕ್ಕೆ 16 ಕೋಟಿಗಳಿಂದ 18 ಕೋಟಿ ರೂ. ಗಳನ್ನು ಸಂಗ್ರಹಿಸುವ ನಿರೀಕ್ಷೆ ಸರಕಾರಕ್ಕಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ನಾಯಕರು, ಪ್ರತಿಪಕ್ಷ ನಾಯಕರು, ಸಚಿವರು, ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ಸ್ಪೀಕರ್, ಡೆಪ್ಯುಟಿ ಸ್ಪೀಕರ್, ಅವರೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದೇವೆಂದು ಸಚಿವರು ತಿಳಿಸಿದರು. ಶೇಕಡಾ 30ರಷ್ಟು ವೇತನವನ್ನು ಕಡಿತಗೊಳಿಸುವ ನಿರ್ಧಾರವನ್ನು ಎಲ್ಲರೂ ಅಗೀಕರಿಸಿದ್ದಾರೆ ಎಂದು ಅವರು ತಿಳಿಸಿದರು. ಶಾಸಕರ ವೇತನವನ್ನು ಕಡಿತಗೊಳಿಸುವ ಮೂಲಕ ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಾಜ್ಯದ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸುವುದಾಗಿ ಸರಕಾರ ಹೇಳಿದೆ.

- Advertisement -