ಕೋವಿಡ್ ನಡುವೆ ಪಾದಯಾತ್ರೆಗೆ ಯಾಕೆ ಅನುಮತಿ ಕೊಟ್ರಿ: ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ತರಾಟೆ

Prasthutha|

ಬೆಂಗಳೂರು: ಕೊರೋನಾ ಸೋಂಕಿತರ  ಸಂಖ್ಯೆ ಏರಿಕೆ ನಡುವೆಯೂ ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿರುವ ಕ್ರಮಕ್ಕೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

- Advertisement -

ಈ ಕುರಿತು ಸಲ್ಲಿಕೆಯಾಗಿರುವ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ, ಕೋವಿಡ್ ಹೆಚ್ಚುತ್ತಿರುವ ವೇಳೆ ಜಾಥಾ ನಡೆಸಲು ಅನುಮತಿ ನೀಡಿದ್ದು ಯಾರು ಎಂದು ಸರ್ಕಾರವನ್ನೂ ಕಟುವಾಗಿ ಪ್ರಶ್ನಿಸಿದೆ. ಅನುಮತಿ ಕೊಟ್ಟಿಲ್ಲ ಎಂದಾದರೆ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದೇಕೆ, ಕ್ರಮ ಕೈಗೊಳ್ಳಲು ನ್ಯಾಯಾಲಯವೇ ಹೇಳಬೇಕೆ ಎಂದು ಕೇಳಿದೆ.

ಜೊತೆಗೆ ಈ ಪಾದಯಾತ್ರೆ ನಡೆಸಲು ಅನುಮತಿ ತೆಗೆದುಕೊಂಡಿದ್ದೀರಾ..? ರಾಜ್ಯ ಸರ್ಕಾರ ಹೊರಡಿಸಿರುವ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆಯೇ..? ಈ ಮಾರ್ಗಸೂಚಿಗೆ ಬದ್ಧವಾಗಿರಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ..? ನಿಯಮಗಳನ್ನು ಉಲ್ಲಂಘಿಸಿದ ಸಮಯದಲ್ಲಿ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸುವಂತೆ ಕೆಪಿಸಿಸಿಗೆ ಹೈಕೋರ್ಟ್ ಹೇಳಿದೆ.

Join Whatsapp