ಕೋವಿಡ್ ನಿಯಂತ್ರಣ; ಸಮರ ಸೈನಿಕರೊಂದಿಗೆ ಕೈಜೋಡಿಸಲು ರೋಟರಿ ಉಪರಾಜ್ಯಪಾಲ ಅನಿಲ್ ಕರೆ

Prasthutha|

ಮಡಿಕೇರಿ: ಕೋವಿಡ್ ಎಂಬ ಕಣ್ಣಿಗೆ ಕಾಣದ ವೈರಸ್ ವಿರುದ್ದ ಆರೋಗ್ಯ ಕಾರ್ಯಕರ್ತರು ಕಳೆದ 22 ತಿಂಗಳಿನಿAದ ಕೈಗೊಂಡಿರುವ ಹೋರಾಟ ಎಂದು ಮುಗಿಯುತ್ತದೆಯೋ ತಿಳಿಯದಾಗಿದು. ಜನತೆ ಜಾಗ್ರತರಾಗಿ ಆರೋಗ್ಯವಂತ ಮತ್ತು ಸುರಕ್ಷಿತ ಸಮಾಜಕ್ಕೆ ಈ ಸಮರ ಸೈನಿಕರೊಂದಿಗೆ ಕೈಜೋಡಿಸಬೇಕಾಗಿದೆ ಎಂದು ರೋಟರಿ ಸಂಸ್ಥೆಯ ಉಪರಾಜ್ಯಪಾಲ ಅನಿಲ್ ಎಚ್.ಟಿ. ಕೋರಿದ್ದಾರೆ.

- Advertisement -

ನಗರದ ರೋಟರಿ ಸಭಾಂಗಣದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‍ ನ ಕೊಡಗು ಶಾಖೆ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಬೂಸ್ಟರ್ ಲಸಿಕೆ ನೀಡಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕೋವಿಡ್ ವೈರಸ್ ಹತೋಟಿಗೆ ತರಲು ಸಾವಿರಾರು ಆರೋಗ್ಯ ಕಾರ್ಯಕರ್ತರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಶ್ರಮವಹಿಸುತ್ತಿದ್ದಾರೆ ಎಂದರು.

ಭಾರತದಲ್ಲಿ ಮುಂಚೂಣಿ ಕಾರ್ಯಕರ್ತರು, ೬೦ ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಲಸಿಕೆ ನೀಡುವ ಯೋಜನೆ ಅತ್ಯಂತ ಶ್ಲಾಘನೀಯವಾಗಿದೆ. ಈ ಮೂಲಕ ಜಗತ್ತಿನ ಬೇರೆ ಯಾವುದೇ ದೇಶಕ್ಕಿಂತ ಆರೋಗ್ಯ ಸಂರಕ್ಷಣೆ ವಿಚಾರದಲ್ಲಿ ತಾನು ಮುಂಚೂಣಿಯಲ್ಲಿ ಇರುವುದಾಗಿ ಭಾರತ ನಿರೂಪಿಸಿದೆ ಎಂದು ಶ್ಲಾಘಿಸಿದ ಅನಿಲ್ ಎಚ್.ಟಿ. ಅವರು, ಕೊಡಗಿನಲ್ಲಿ ಶೇ.88 ಪ್ರಮಾಣದಷ್ಟು ಲಸಿಕೆ ನೀಡಿಕೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕಾರ್ಯ ಯೋಜನೆ ಮಹತ್ವದ್ದಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

- Advertisement -

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಡಾ.ಶ್ಯಾಮ್ ಅಪ್ಪಣ್ಣ, ಪ್ರಧಾನ ಕಾರ್ಯದರ್ಶಿ ಡಾ.ಸಿ.ಆರ್.ಪ್ರಶಾಂತ್, ಹಿರಿಯ ವೈದ್ಯ ಡಾ.ಎಂ.ಜಿ.ಪಾಟ್ಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಡಾ.ಗೋಪಿನಾಥ್, ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಮೋಹನ್ ಪ್ರಭು, ಗಾನಾ ಪ್ರಶಾಂತ್ ಹಾಜರಿದ್ದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾದ ಅನಿತಾ ಪೂವಯ್ಯ ಸ್ವಾಗತಿಸಿ, ಮುಂದಿನ ಸಾಲಿನ ಅಧ್ಯಕ್ಷ ಪ್ರಸಾದ್ ಗೌಡ ವಂದಿಸಿದರು. ಹಲವರು ಈ ಸಂದರ್ಭ ಬೂಸ್ಟರ್ ಲಸಿಕೆ ಪಡೆದರು.

Join Whatsapp