ಮಂಗಳೂರಿನಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ : ಆರೋಪಿ ವಿಷ್ಣು ಪ್ರಸಾದ್ ವಿರುದ್ಧ ತನಿಖೆ ನಡೆಸುತ್ತೇವೆಂದ ಫೆಡರಲ್ ಬ್ಯಾಂಕ್

Prasthutha|

►ಫೇಸ್ಬುಕ್ ಪೋಸ್ಟನ್ನು ಟ್ವಿಟ್ಟರಿನಲ್ಲಿ ಬ್ಯಾಂಕ್ ಗಮನಕ್ಕೆ ತಂದಿದ್ದ ಜಾಲತಾಣಿಗರು

- Advertisement -

ಇತ್ತಿಚೆಗೆ ಕರಾವಳಿ ಭಾಗದ ವಿಟ್ಲದಲ್ಲಿ ನಡೆದಿತ್ತೆನ್ನಲಾದ ಕೊರಗ ವೇಷ ವಿವಾದಕ್ಕೆ ಸಂಬಂಧಪಟ್ಟಂತೆ ಫೇಸ್ಬುಕ್ ನಲ್ಲಿ ವಿಷ್ಣುಪ್ರಸಾದ್ ಎಂಬಾತ ಮಂಗಳೂರಿನಲ್ಲೂ ಗುಜರಾತ್ ಮಾದರಿಯ ನರಮೇಧ ನಡೆಸಬೇಕು. ಆಗಷ್ಟೇ ಮುಸ್ಲಿಮರು ಪಾಠ ಕಲಿಯುತ್ತಾರೆಂಬ ರೀತಿಯ ಪೋಸ್ಟ್ ಮಾಡಿದ್ದ. ಈ ಕುರಿತು ‘ಪ್ರಸ್ತುತ’ ವರದಿ ಮಾಡಿತ್ತು. ಆರೋಪಿ ವಿಷ್ಣುಪ್ರಸಾದ್ ಫೆಡರಲ್ ಬ್ಯಾಂಕಿನಲ್ಲಿ ವ್ಯಾವಹಾರಿಕ ಮುಖಸ್ಥನಾಗಿ ವೃತ್ತಿ ನಿರ್ವಹಿಸುತ್ತಿದ್ದ. ಟ್ವಿಟ್ಟರ್ ಬಳಕೆದಾರರೊಬ್ಬರು ಘಟನೆಯ ಕುರಿತು ಫೆಡರಲ್ ಬ್ಯಾಂಕನ್ನು ಉಲ್ಲೇಖಿಸಿ ಪ್ರಶ್ನಿಸಿದ್ದರು. ಈ ಟ್ವೀಟ್ ಗೆ ಫೆಡರಲ್ ಬ್ಯಾಂಕ್ ಪ್ರತಿಕ್ರಿಯಿಸಿದೆ.

ಟ್ವಿಟ್ಟರ್ ಬಳಕೆದಾರರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಫೆಡರಲ್ ಬ್ಯಾಂಕ್, “ಒಂದು ಜವಾಬ್ದಾರಿಯುತ ಸಂಸ್ಥೆಯಾಗಿ, ನಮ್ಮ ಉದ್ಯೋಗಿಗಳ ಕಡೆಯಿಂದ ಯಾವುದೇ ಅಸಭ್ಯ, ಹಿಂಸಾತ್ಮಕ, ಅನಪೇಕ್ಷಿತ ಅಥವಾ ಪ್ರಶ್ನಾರ್ಹ ಕೃತ್ಯಗಳನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ ಮತ್ತು ಉತ್ತೇಜಿಸುವುದಿಲ್ಲ” ಎಂದು ಹೇಳಿದೆ. ಈ ಕುರಿತು ನಮ್ಮ ಸಂಸ್ಥೆಯು ಶೂನ್ಯ ಸಹಿಷ್ಣುವಾಗಿದೆ. ಈ ರೀತಿಯ ಕೃತ್ಯಗಳಿಂದ ನಾವು ಅಂತರ ಕಾಪಾಡುತ್ತೇವೆ ಮತ್ತು ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥನ ವಿರುದ್ಧ ಆರೋಪ ಸರಿ ಎಂದಾದಲ್ಲಿ ಕ್ರಮ  ಕೈಗೊಳ್ಳುತ್ತೇವೆ ಎಂದು ಕೂಡಾ ಪ್ರತಿಕ್ರಿಯೆ ನೀಡಿದೆ.

- Advertisement -

ಫೆಡರಲ್ ಬ್ಯಾಂಕಿನ ಬೆಂಗಳೂರು ದಕ್ಷಿಣ ವಲಯ ಕಚೇರಿಗೆ ‘ಪ್ರಸ್ತುತ’ ಈ ಕುರಿತು ಮಾಹಿತಿಗಾಗಿ ಸಂಪರ್ಕಿಸಿದ್ದು, ಸಂಸ್ಥೆಯ ಆಲುವಾ ಕೇಂದ್ರ ಕಚೇರಿಯ ಶಿಸ್ತು ಸಮಿತಿಯು ಈ ಕುರಿತು ಕಾರ್ಯನಿರ್ವಹಿಸುತ್ತಿದ್ದು,  ತನಿಖೆ ನಡೆಸಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದೆ.

Join Whatsapp