ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ಇದೆ, ಬಿಜೆಪಿ ಬಿಡೋಕೆ ಸಿದ್ಧ: ಹೆಚ್. ವಿಶ್ವನಾಥ್

Prasthutha|

ಮೈಸೂರು: ನನ್ನ ರಕ್ತದ ಕಣ ಕಣದಲ್ಲೂ ಕಾಂಗ್ರೆಸ್ ಇದೆ. ನಾನು ಬಿಜೆಪಿ ಬಿಡಲು ಸಿದ್ಧವಾಗಿರೋದು ಸತ್ಯ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಹಣ ಪಡೆದು ಬಿಜೆಪಿ ಸರ್ಕಾರ ತಂದಿದ್ದರೇ ಇವತ್ತು ಹೀಗೆ ಸರ್ಕಾರದ ತಪ್ಪು ಹೇಳೋಕೆ ಧೈರ್ಯ ಬರುತ್ತಿತ್ತಾ? `I am Clean Man’. ನಾನು ಇಷ್ಟು ವರ್ಷ ರಾಜಕಾರಣದಲ್ಲಿದ್ದರೂ ಚಿಕ್ಕ ಮನೆಯಲ್ಲಿದ್ದೇನೆ. ಅಪ್ಪನ ಜಮೀನಲ್ಲೇ ದುಡಿದು ಮಕ್ಕಳನ್ನು ಸಾಕಿದ್ದೇನೆ ಎಂದು ಹೇಳಿದ್ದಾರೆ.


ಇದೇ ವೇಳೆ ಕೇಂದ್ರ ಬಜೆಟ್ ಬಗ್ಗೆ ಹೆಚ್. ವಿಶ್ವನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಕ್ಷರ, ಅನ್ನ, ಆರೋಗ್ಯವನ್ನು ಕೇಂದ್ರ ಬಜೆಟ್ ನಲ್ಲಿ ಕಡೆಗಣಿಸಲಾಗಿದೆ. ವಿಮಾನ ನಿಲ್ದಾಣಕ್ಕಿಂತ ನಮಗೆ ಅಕ್ಷರ, ಅನ್ನ, ಆರೋಗ್ಯ ಬೇಕು. ಮೋದಿ ಸರ್ಕಾರಕ್ಕೆ ಜನರ ಕಷ್ಟ ಅರ್ಥವಾಗಿಲ್ಲ. ದೇಶ ಎಲ್ಲಾ ಕ್ಷೇತ್ರಗಳಲ್ಲಿ ಹಿಂದುಳಿಯುತ್ತಿದೆ. ದೇಶಕ್ಕೆ ಮೂಲಭೂತವಾಗಿ ಏನೂ ಬೇಕಿದೆ ಎಂಬುದೇ ಕೇಂದ್ರ ಸರ್ಕಾರಕ್ಕೆ ಅರ್ಥವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

Join Whatsapp