ಪಂಚರಾಜ್ಯಗಳ ಚುನಾವಣೆ : ಬಂಗಾಳದಲ್ಲಿ ಟಿಎಂಸಿ, ಅಸ್ಸಾಂ ಬಿಜೆಪಿ, ತಮಿಳುನಾಡು ಡಿಎಂಕೆ, ಕೇರಳದಲ್ಲಿ ಎಡರಂಗಕ್ಕೆ ಮುನ್ನಡೆ

Prasthutha|

ದೆಹಲಿ : ಪಂಚರಾಜ್ಯಗಳ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ. ಒಟ್ಟು 292 ಕ್ಷೇತ್ರಗಳ ಪೈಕಿ 248 ಕ್ಷೇತ್ರಗಳ ಫಲಿತಾಂಶದ ಮುನ್ನಡೆ ಫಲಿತಾಂಶದ ಆಧಾರದಲ್ಲಿ ಟಿಎಂಸಿ 126 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದರೆ, ಅದರ ಬೆನ್ನಲ್ಲೇ ಇರುವ ಬಿಜೆಪಿ 120 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುಮತಕ್ಕಾಗಿ 147 ಸೀಟುಗಳ ಅಗತ್ಯವಿದೆ.

- Advertisement -

ಕೇರಳದ ಒಟ್ಟ್ಟು 140 ಕ್ಷೇತ್ರಗಳ ಪೈಕಿ 99ರ ಮುನ್ನಡೆ ಫಲಿತಾಂಶದಲ್ಲಿ ಎಡರಂಗ 68 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ 29 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.ಬಿಜೆಪಿ ಮತ್ತು ಇತರರು ತಲಾ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಅಸ್ಸಾಮಿನ ಒಟ್ಟು 126 ಕ್ಷೇತ್ರಗಳಲ್ಲಿ 107 ಕ್ಷೇತ್ರಗಳ ಮುನ್ನಡೆ ಫಲಿತಾಂಶದ ಆಧಾರದಲ್ಲಿ ಬಿಜೆಪಿ 65 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 39 ಮತ್ತು ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

- Advertisement -

ತಮಿಳುನಾಡಿನಲ್ಲಿ ಡಿಎಂಕೆ ಮುನ್ನಡೆಯಲ್ಲಿದೆ. ಒಟ್ಟು 234 ಸ್ಥಾನಗಳ ಪೈಕಿ 109 ಸ್ಥಾನಗಳ ಮುನ್ನಡೆ ಫಲಿತಾಂಶದಲ್ಲಿ ಡಿಎಂಕೆ 75 ಸ್ಥಾನಗಳಲ್ಲಿ , ಎಐಎಡಿಎಂಕೆ 41 ಸ್ಥಾನಗಳಲ್ಲಿ ಎಂಎನ್ಎಂ 1 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.

ಪುದುಚೇರಿಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ

Join Whatsapp