ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 101 ನೇ ಸ್ಥಾನಕ್ಕೆ ಕುಸಿತ: ಕಪಿಲ್ ಸಿಬಲ್ “ಅಭಿನಂದನೆ”

Prasthutha|

ಬೆಂಗಳೂರು: 2021ರ ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಭಾರತ 101 ನೇ ಸ್ಥಾನಕ್ಕೆ ಕುಸಿದಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ‘ ಅಭಿನಂದನೆ ‘ ಸಲ್ಲಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿದ ಅವರು,  ರಾಷ್ಟ್ರದ ಬಡತನ ಮತ್ತು ಹಸಿವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ್ದಕ್ಕೆ ಮೋದಿ ಜೀ ಅವರಿಗೆ ಅಭಿನಂದನೆಗಳು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಜಾಗತಿಕ ಹಸಿವು ಸೂಚ್ಯಂಕ ಪಟ್ಟಿಯಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನೇಪಾಳ ರಾಷ್ಟ್ರಗಳಿಗಿಂತ ಭಾರತ ಹಿಂದಿರುವುದನ್ನು ಒತ್ತಿ ಹೇಳಿದ್ದಾರೆ.

Join Whatsapp