ಕಣ್ಣೂರು ಕಾರುಣ್ಯ ಸೇವೆ ವತಿಯಿಂದ ಮಾಹಿತಿ ಹಾಗೂ ಸೇವಾ ಕಛೇರಿ ಆರಂಭ

Prasthutha|

ಮಂಗಳೂರು:  ಊರಿನ ಜನತೆಗೆ ಸರ್ಕಾರಿ ಸವಲತ್ತು ಹಾಗೂ ಅಗತ್ಯ ಆನ್ಲೈನ್ ಕಾರ್ಯಗಳನ್ನು ಸುಲಭ ಗೊಳಿಸಲು ಕಣ್ಣೂರು ಪರಿಸರದ ಸಾಮಾಜಿಕ ಸೇವಾ ಮನೋಭಾವವುಳ್ಳ ಯುವಕರು  ಸ್ಥಾಪಿಸಿದ ಕಣ್ಣೂರು ಕಾರುಣ್ಯ ಸೇವೆ ಎಂಬ ಸಂಸ್ಥೆಯನ್ನು ಕಣ್ಣೂರು ಬದ್ರಿಯಾ ಜುಮಾ ಮಸ್ಜಿದ್ ಖತೀಬರಾದ ಅನ್ಸಾರ್ ಫೈಝಿ ಅಲ್ ಬುರ್ಹಾನಿ  ಉದ್ಘಾಟಿಸಿದರು.

- Advertisement -

ಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಕಣ್ಣೂರು  ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅನ್ಸಾರ್ ಫೈಝಿ ಅವರು ಸಾಮಾಜಿಕ ಸೇವಾ ಕಾರ್ಯಗಳನ್ನು ಇಸ್ಲಾಂ ಧರ್ಮದಲ್ಲಿ ಒಂದು ಮಹತ್ವ ಪೂರ್ಣ ಕಾರ್ಯ, ಈ ಸಂಘಟನೆ ಊರಿಗೆ ಮಾದರಿಯಾಗಿ ಇನ್ನಷ್ಟು ಬೆಳೆಯಲೆಂದು ಆಶೀರ್ವದಿಸಿದರು. ಕೇಂದ್ರ ಜುಮಾ ಮಸ್ಜಿದ್ ಮುದರಿಸ್ ಮುಸ್ತಾಫಾ ಅನ್ಸಾರಿ ದುವಾಶೀರ್ವಚನಗೈದರು. ಮದರಸತುಲ್ ಇಸ್ಲಾಮಿಯಾ ಇದರ ಸದರ್ ಮುಅಲ್ಲಿಂ ಸಿರಾಜುದ್ದೀನ್ ಎಸ್ ಎಮ್ ರವರು  ಸಾಮಾಜಿಕ ಕಾರ್ಯದ ಬಗ್ಗೆ ಹಿತವಚನ ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕ್ರಿಯೇಟಿವ್ ಫೌಂಡೇಷನ್ ಮಂಗಳೂರು ಇದರ ಕಾರ್ಯದರ್ಶಿ ಅಕ್ಬರ್ ಅಲಿ ಮಾಹಿತಿ ಹಾಗೂ ಸೇವಾ ಕಾರ್ಯದ ವಿಧಾನಗಳನ್ನು ವಿವರಿಸಿದರು. ಹಫೀಜ್ ಸ್ವಾಗತಿಸಿದರು, ಅಬ್ದುಲ್ ರಝ್ಹಾಕ್ ಅಭಿನಂದಿಸಿ ಕಾರ್ಯಕ್ರಮ ನಿರೂಪಿಸಿದರು.

- Advertisement -

ಈ ವರ್ಷದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದು ಊರಿಗೆ ಮಾದರಿಯಾದ ಕಣ್ಣೂರಿನ ವಿದ್ಯಾರ್ಥಿನಿಗಳಾದ ಫಾತಿಮಾ ಸನಾ, ಟಿ. ಆರ್. ನಂದಿನಿ, ಫರ್ವೀನ ಹಾಗೂ ಊರಿನ ಯುವ  ವಕೀಲರಾದ ಹೈದರ್ ಮತ್ತು ನೌಶಾದ್, ಇವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ  ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷರಾದ ಕೆ.ಸಾಹುಲ್ ಹಮೀದ್ ಹಾಜಿ, ತೌಹಿದ್ ಮಸೀದಿ ಅಧ್ಯಕ್ಷರಾದ ಕೆ ಅಹ್ಮದ್ ಬಾವಾ, ರಹ್ಮಾನಿಯಾ ಮಸೀದಿ ದಯಂಬು ಇದರ ಅಧ್ಯಕ್ಷರಾದ ಕೆ ಮೊಹಮ್ಮದ್,  ಮೊಹಿಯುದ್ದೀನ್ ಜುಮಾ ಮಸೀದಿ ಅಡ್ಯಾರ್ ಕಟ್ಟೆ ಇದರ ಅಧ್ಯಕ್ಷರಾದ ಅಬ್ದುಲ್ ನಝೀರ್ ಅಡ್ಯಾರ್, ಎಸ್.ಡಿ ಶಾಕಿರ್, PFI ಕಣ್ಣೂರು ಇದರ ಅಧ್ಯಕ್ಷರಾದ ಇರ್ಫಾನ್, ತಖ್ವ್ ತುಲ್ ಇಸ್ಲಾಂ ಮದ್ರಸ ಇದರ ಅಧ್ಯಕ್ಷರಾದ ಅಬ್ದುಲ್ ಖಾದರ್ ಬಲ್ಲೂರ್ ಗುಡ್ಡೆ, SDPI ಅಧ್ಯಕ್ಷರಾದ ಶರೀಫ್ ಕಾರಾವಳಿ, ಊರಿನ ಗಣ್ಯರಾದ ಇಮ್ರಾನ್ ಜುಬೈಲ್, ಆಸಿಫ್ ಗಾಣದಬೆಟ್ಟು, ಅಶ್ರಪ್ KSH ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

Join Whatsapp