ಸಾರಿಗೆ ನೌಕರರ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಆಗ್ರಹ

Prasthutha|

ಬೆಂಗಳೂರು: ಸಾರಿಗೆ ನೌಕರರ ಆತ್ಮಹತ್ಯೆ ಪ್ರಕರಣಕ್ಕೆ ಸಂಭಂದಿಸಿ ಸರಕಾರದ ಮೌನವನ್ನು ಖಂಡಿಸುತ್ತಾ ಪ್ರಕರಣವನ್ನು ತನಿಖೆಗೋಳಪಡಿಸಿ ತಪ್ಪಿತಸ್ಥ ಅಧಿಕಾರಿಗಳನ್ನು ವಜಾ ಮಾಡಬೇಕು ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಸೌಜನ್ಯ ತೋರಬೇಕು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ( SDTU) ರಾಜ್ಯಾಧ್ಯಕ್ಷ ಫಝಲುಲ್ಲಾ ಸರ್ಕಾರವನ್ನು ಆಗ್ರಹಿಸಿದ್ದಾರೆ

- Advertisement -

ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅಕ್ರಮ ಚಟುವಟಿಕೆ, ಚಾಲಕರಿಗೆ, ನೀಡಲಾಗುತ್ತಿರುವ ಕಿರುಕುಳ ಇತ್ಯಾದಿಗಳಿಂದ ಮನನೊಂದು ಆತ್ಮಹತ್ಯೆಯಲ್ಲಿ ಅಂತ್ಯವಾಗುವುದು ದುರಂತವಾಗಿದೆ

ಚಾಲಕಾರಿಗಾಗಲಿ ನಿರ್ವಾಹಕರಿಗಾಗಲಿ ಅಥವಾ ಇನ್ಯಾವುದೇ ಅಧಿಕಾರಿಗಾಗಲಿ ಒತ್ತಡ ಕಿರುಕುಳ ನಡೆದರೆ ಸಂಬಂಧಪಟ್ಟ ಪೋಲಿಸ್ ಇಲಾಖೆಯನ್ನು ಸಂಪರ್ಕಿಸಿ ಆದರೆ ಆತ್ಮಹತ್ಯೆಯಂತಹ ದುರಂತಕ್ಕೆ ಕೈಹಾಕಬೇಡಿ ಎಂದು SDTU ನಿವೇದಿಸುತ್ತದೆ

- Advertisement -

ದುಡಿಯುವ ವರ್ಗವನ್ನು ಆತ್ಮಹತ್ಯೆಯಂತಹ ದುರಂತಕ್ಕೆ ಒಡ್ದುವ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸಂತ್ರಸ್ಥರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು SDTU ಆಗ್ರಹಿಸುತ್ತದೆ

Join Whatsapp