ಕನ್ನಡ ರಾಜ್ಯೋತ್ಸವದ ಅಂಗವಾಗಿ ಒಂದು ತಿಂಗಳ ಸಂಭ್ರಮಾಚರಣೆ ಕಾರ್ಯಕ್ರಮ: ಎಸ್‌ಡಿಪಿಐ

Prasthutha|

ಬೆಂಗಳೂರು, 25 ಅಕ್ಟೋಬರ್ 2022: ಕನ್ನಡ ರಾಜ್ಯೋತ್ಸವವನ್ನು ಈ ಬಾರಿ ಅದ್ದೂರಿ ಮತ್ತು ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಸಮೃದ್ಧ, ಸ್ವಾವಲಂಬಿ ಕರ್ನಾಟಕ ನಮ್ಮ ಗುರಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ನವೆಂಬರ್ 1ನೇ ತಾರೀಖಿನಿಂದ ಮೊದಲುಗೊಂಡು ಇಡೀ ತಿಂಗಳು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅದರ ಅಂಗವಾಗಿ ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣ, ಶ್ರಮದಾನ, ಸಾಧಕರಿಗೆ ಸನ್ಮಾನ ಒಳಗೊಂಡಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷ ಬಿಡುಗಡೆ ಗೊಳಿಸಿರುವ ಪೋಸ್ಟರ್ ನಲ್ಲಿ ಪ್ರಕಟಿಸಿದೆ.

- Advertisement -

ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ. ಅದರ ಈ ಕೀರ್ತಿಗೆ ಇತ್ತೀಚೆಗೆ ಧಕ್ಕೆ ಆಗಿರುವುದು ನಿಜ. ಆದರೆ ಬಸವಣ್ಣ, ಕುವೆಂಪು ಅವರಂತಹ ದಾರ್ಶನಿಕರನ್ನು ಕಂಡ ಈ ಕನ್ನಡ ಮಣ್ಣಿಗೆ ಅದರಿಂದ ಬಹುಬೇಗ ಹೊರಬರುವ ಶಕ್ತಿ ಇದೆ. ಅದಕ್ಕಾಗಿ ಎಸ್‌ಡಿಪಿಐ ಪಕ್ಷವು ಕೂಡ ಹಗಲಿರುಳು ಶ್ರಮಿಸಲಿದೆ. ಅದರ ಭಾಗವಾಗಿಯೇ ರಾಜ್ಯೋತ್ಸವವನ್ನು ಇಡೀ ತಿಂಗಳ ಸಂಭ್ರಮವನ್ನಾಗಿಸುವ ಯೋಜನೆ ರೂಪಿಸಲಾಗಿದೆ ಎಂದು ಪಕ್ಷ ತಿಳಿಸಿದೆ. ಈ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಿ. ಆರ್. ಭಾಸ್ಕರ್ ಪ್ರಸಾದ್ ಅವರು ವಹಿಸಲಿದ್ದಾರೆ ಎಂದು ಪಕ್ಷ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Join Whatsapp