ಕಂಗನಾ ರಾಣಾವತ್ ದೇಶದ್ರೋಹಿ ಹ್ಯಾಶ್‌ಟ್ಯಾಗ್ ಟ್ವಿಟರ್‌ ನಲ್ಲಿ ಟ್ರೆಂಡಿಂಗ್‌

Prasthutha|

ಹೊಸದಿಲ್ಲಿ: ಭಾರತೀಯ ಸ್ವಾತಂತ್ರ್ಯ ಹೋರಾಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಂಗನಾ ರಾಣಾವತ್ ದೇಶದ್ರೋಹಿ ಹ್ಯಾಶ್‌ ಟ್ಯಾಗ್ (#KanganaRanautDeshdrohi) ಟ್ವಿಟ್ಟರ್‌ ನಲ್ಲಿ ಟ್ರೆಂಡಿಂಗ್ ಆಗಿದೆ.

- Advertisement -

ಮೂರ್ಖರಂತೆ ಮಾತನಾಡುವ ಕಂಗನಾ ರಾಣಾವತ್ ಯಾವುದೇ ಪ್ರಶಸ್ತಿಗೆ ಅರ್ಹಳಲ್ಲ. ಅವರನ್ನು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಬೇಕೆಂದು ಟ್ವಿಟ್ಟರ್ ನಲ್ಲಿ ಹಲವರು ಆಗ್ರಹಿಸಿದ್ದಾರೆ.

ಹಲವಾರು ಮಕ್ಕಳ ಜೀವ ಉಳಿಸಿದ ವೈದ್ಯರನ್ನು ಜೈಲಿಗೆ ಹಾಕಲಾಗುತ್ತದೆ. ಹಾಗಾದರೆ ಕಂಗನಾ ಮೇಲೆ ಯಾಕೆ ಯುಎಪಿಎ ಹಾಕಲಾಗುತ್ತಿಲ್ಲ? ಎಂಬ ಪ್ರಶ್ನೆಯೂ ಕೇಳಿಬಂದಿದೆ.

- Advertisement -

ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತು ರಾಷ್ಟ್ರೀಯ ಮಾಧ್ಯಮವೊಂದರ ವಾರ್ಷಿಕ ಶೃಂಗಸಭೆಯಲ್ಲಿ ಕಂಗನಾ ರಾಣಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಂತರ ಅವರು ತಮ್ಮ ಹೇಳಿಕೆಯನ್ನು ತಪ್ಪೆಂದು ಸಾಬೀತುಪಡಿಸಿದರೆ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿ ಕ್ಷಮೆಯಾಚಿಸುವುದಾಗಿ ಹೇಳಿದ್ದರು.

Join Whatsapp