ಮಣಿಪುರ | ಉಗ್ರರ ಹೊಂಚು ದಾಳಿಗೆ ಕರ್ನಲ್, ಪತ್ನಿ, ಪುತ್ರ ಸೇರಿದಂತೆ ಏಳು ಮಂದಿ ಹುತಾತ್ಮ

Prasthutha|

ಮಣಿಪುರ: ಮಣಿಪುರದ ಮ್ಯಾನ್ಮಾರ್ ಗಡಿಯಲ್ಲಿ ಉಗ್ರರು ನಡೆಸಿದ ಹೊಂಚು ದಾಳಿಯಲ್ಲಿ ಭಾರತೀಯ ಸೇನೆಯ ಕರ್ನಲ್, ಅವರ ಪತ್ನಿ, ಪುತ್ರ ಹಾಗೂ ನಾಲ್ವರು ಯೋಧರು ಸೇರಿದಂತೆ ಏಳು ಮಂದಿ ಹುತಾತ್ಮರಾಗಿರುವ ಘಟನೆ ಇಂದು ನಡೆದಿದೆ. ಬೆಳಗ್ಗೆ 10ರ ಸುಮಾರಿಗೆ ಮಣಿಪುರದ ಚುರಾಚಂದ್ ಪುರ್ ಜಿಲ್ಲೆಯ ಸಮೀಪ ಈ ಘಟನೆ ನಡೆದಿದೆ ಎಂದು ಸೇನೆ ಮೂಲಗಳು ತಿಳಿಸಿವೆ.

- Advertisement -

ಶನಿವಾರ ಸೇನಾ ಶಿಬಿರದತ್ತ ತೆರಳಿದ್ದ ಕಮಾಂಡಿಂಗ್ ಆಫೀಸರ್ ಕರ್ನಲ್ ವಿಪ್ಲವ್ ತ್ರಿಪಾಠಿ, ಶಿಬಿರದಿಂದ ಹಿಂದಿರುಗುತ್ತಿದ್ದ ವೇಳೆ ಬೆಂಗಾವಲು ಪಡೆ ಸೇರಿದಂತೆ ಎರಡೂ ವಾಹನಗಳ ಮೇಲೆ ಹೊಂಚುಹಾಕಿ ಉಗ್ರರು ದಾಳಿ ನಡೆಸಿದ್ದಾರೆ. ಮಣಿಪುರ ಮೂಲದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ ಎ) ಈ ದಾಳಿಯ ಹಿಂದಿರುವುದಾಗಿ ಶಂಕಿಸಲಾಗಿದದ್ದು, ಈವರೆಗೂ ಯಾವುದೇ ಸಂಘಟನೆಗಳು ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ ಎನ್ನಲಾಗಿದೆ.

Join Whatsapp