ಕಮಲಾ ಹ್ಯಾರಿಸ್ ಬಿಜೆಪಿ ವಿರೋಧಿ, ಮೋದಿ ಆತ್ಮನಿರ್ಭರರಾಗುವುದು ಒಳ್ಳೆಯದು : ಸುಬ್ರಹ್ಮಣಿಯನ್ ಸ್ವಾಮಿ ಸಲಹೆ

Prasthutha|

ನವದೆಹಲಿ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಬಿಜೆಪಿ ಚಿಂತನೆಗಳಿಗೆ ವಿರುದ್ಧವಾಗಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸರಕಾರ, ಜೋ ಬಿಡೆನ್ ಓಲೈಕೆಯನ್ನು ಕೈಬಿಡಬೇಕು ಎಂದು ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಒತ್ತಾಯಿಸಿದ್ದಾರೆ.

ಮೋದಿ ಸರಕಾರ ಅಂಗಲಾಚುವುದನ್ನು ಬಿಡಬೇಕು. ಜೋ ಬೈಡನ್, ಕಮಲಾ ಹ್ಯಾರಿಸ್ ಪರವಾಗಿ ಇರುತ್ತಾರೆ. ಕಮಲಾ ಹ್ಯಾರಿಸ್ ಹಿಂದು ಸಿದ್ಧಾಂತದ ವಿರೋಧಿಯಾಗಿದ್ದಾರೆ. ಇದರ ಅರ್ಥ ಬಿಜೆಪಿ ಮತ್ತು ಮೋದಿ ಆತ್ಮನಿರ್ಭರರಾಗಬೇಕೆಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

- Advertisement -

ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜೇತರಾದ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಗೆ ಶುಭಾಶಯ ಕೋರಿದ್ದ ಪ್ರಧಾನಿ ಮೋದಿಯವರಿಗೆ ಟಾಂಗ್ ನೀಡಿ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಕಮಲಾ ಹ್ಯಾರಿದ್ ಬಿಜೆಪಿ ಸರಕಾರ ಕಾಶ್ಮೀರ ವಿಧಿ 370 ರದ್ದು ಮಾಡಿದ್ದುದನ್ನು ತೀವ್ರವಾಗಿ ಖಂಡಿಸಿದ್ದರು. ಕಾಶ್ಮೀರದ ಸ್ಥಿತಿಗತಿ ನಾವು ಗಮನಿಸುತ್ತಿದ್ದೇವೆ. ಕಾಶ್ಮೀರ ಏಕಾಂಗಿಯಲ್ಲವೆಂದು ಅವರು 2019ರಲ್ಲಿ ಹೇಳಿದ್ದರು. ಇಲ್ಲಿವರೆಗಿನ ಅವರ ಹೇಳಿಕೆಗಳು ಬಿಜೆಪಿ ದೋರಣೆಗೆ ವಿರುದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ಸ್ವಾಮಿ ಇಂತಹ ಸಲಹೆಯೊಂದನ್ನು ನೀಡಿದ್ದಾರೆ ಎನ್ನಲಾಗಿದೆ.

- Advertisement -