ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ಹೊಸ ಪ್ರಸ್ತಾಪಿತ ಸಿನೆಮಾ ನೀತಿಯ ತಿದ್ದುಪಡಿ ಕುರಿತು ಜನಪ್ರಿಯ ನಟ ಕಮಲ್ ಹಾಸನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರಕಾರದ ಹೊಸ ನೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿನೆಮಾ, ಮಾಧ್ಯಮ ಮತ್ತು ಸಾಹಿತ್ಯ ಭಾರತದ ಮೂರು ಆದರ್ಶ ಮಂಗಗಳಂತೆ ಇರಲು ಸಾಧ್ಯವಿಲ್ಲ ಎಂದು ಅವರು ಹೊಸ ತಿದ್ದುಪಡಿಯ ಬಗ್ಗೆ ಅಭಿಪ್ರಾಯ ಪಟ್ಟಿದ್ದಾರೆ.
ಹೊಸ ತಿದ್ದುಪಡಿಯಲ್ಲಿ ಸೆನ್ಸಾರ್ ಮಂಡಳಿಯ ಮೇಲೆ ಸರಕಾರ ಹೆಚ್ಚಿನ ಹಿಡಿತ ಸಾಧಿಸುವ ಮತ್ತು ಸಿನೆಮಾಗಳ ಮರುಪರಿಶೀಲನೆಗೊಳಪಡಿಡುವ ಅವಕಾಶಗಳಿವೆ ಎನ್ನಲಾಗಿದೆ. ಈ ತಿದ್ದುಪಡಿ ಜಾರಿ ಬಂದರೆ, ಈಗಾಗಲೇ ಸೆನ್ಸಾರ್ ಅನುಮೋದನೆ ಪಡೆದಿರುವ ಸಿನೆಮಾಗಳನ್ನೂ ಮರು ವಿಮರ್ಷೆಗೊಳಪಡಿಸುವ ಅಧಿಕಾರ ದೊರೆಯಲಿದೆ ಎನ್ನಲಾಗಿದೆ. ಹೀಗಾಗಿ ಈಗಾಗಲೇ ಸಿನೆಮಾ ರಂಗದ ಹಲವರು ಈ ನೂತನ ತಿದ್ದುಪಡಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.