ಗಣರಾಜ್ಯೋತ್ಸವ ದಿನದ ಹಿಂಸಾಚಾರ ಪ್ರಕರಣ : ನಟ ದೀಪ್‌ ಸಿಧು ವಿರುದ್ಧ ಹೊಸ ಸಮನ್ಸ್‌ ಜಾರಿ

Prasthutha|

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ಮೂರು ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ, ಜ.26ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ನಟ ದೀಪ್‌ ಸಿಧು, ಮತ್ತಿತರರ ವಿರುದ್ಧ ದೆಹಲಿ ಕೋರ್ಟ್‌ ಮತ್ತೊಮ್ಮೆ ಹೊಸ ಸಮನ್ಸ್‌ ಜಾರಿಗೊಳಿಸಿದೆ.

- Advertisement -

ಎಲ್ಲಾ ಆರೋಪಿಗಳು ಜು.12ರಂದು ವೀಡಿಯೊ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ಮುಂದೆ ಹಾಜರಾಗಬೇಕು ಎಂದು ಗಜೇಂದ್ರ ಸಿಂಗ್‌ ನಗರ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆದೇಶಿಸಿದ್ದಾರೆ.

ಆರೋಪಿಯು ಸಮನ್ಸ್‌ ಗಳನ್ನು ಸ್ವೀಕರಿಸಿಲ್ಲ ಎಂಬ ಮಾಹಿತಿ ಪಡೆದ ಬಳಿಕ ಕೋರ್ಟ್‌ ಹೊಸ ಸಮನ್ಸ್‌ ಜಾರಿಗೊಳಿಸಿದೆ. ಜೂ.19ರಂದು ಕೋರ್ಟ್‌ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪ ಪಟ್ಟಿ ಆಲಿಸಿತ್ತು ಮತ್ತು ಜೂ.29ರಂದು ಎಲ್ಲಾ ಆರೋಪಿಗಳು ಹಾಜರಾಗುವಂತೆ ನಿರ್ದೇಶಿಸಿತ್ತು.

- Advertisement -

ಜ.26ರಂದು ದೆಹಲಿಯಲ್ಲಿ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಟ್ರಾಕ್ಟರ್‌ ರ್ಯಾಲಿ ನಡೆದಿತ್ತು. ಈ ವೇಳೆ ಗುಂಪೊಂದು ಕೆಂಪುಕೋಟೆ ಹತ್ತಿ ಧ್ವಜ ಹಾರಿಸಿತ್ತು ಮತ್ತು ಪೊಲೀಸರೊಂದಿಗೆ ಘರ್ಷಣೆ ನಡೆಸಿತ್ತು. ಈ ಹಿಂಸಾಚಾರದಲ್ಲಿ ನಟ ದೀಪ್‌ ಸಿಧು ಪಾತ್ರವಿದ್ದ ಬಗ್ಗೆ ಆರೋಪಗಳಿವೆ.  

Join Whatsapp