ಹೈಕೋರ್ಟ್ ಆದೇಶದ ನಂತರವೂ ಯೋಗಿ ಸರ್ಕಾರದ ದ್ವೇಷ ಸಾಧನೆ | ತಡ ರಾತ್ರಿ ಜೈಲಿನಿಂದ ಡಾ. ಕಫೀಲ್ ಖಾನ್ ಬಿಡುಗಡೆ

Prasthutha|


ಲಖನೌ : ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನದಲ್ಲಿದ್ದ ಉತ್ತರ ಪ್ರದೇಶದ ಸಾಮಾಜಿಕ ಕಾರ್ಯಕರ್ತ ಡಾ. ಕಫೀಲ್ ಖಾನ್ ಅವರನ್ನು ಕಳೆದ ಮಧ್ಯರಾತ್ರಿ ಬಿಡುಗಡೆ ಮಾಡಲಾಗಿದೆ. ಮಥುರಾ ಜೈಲಿನಲ್ಲಿದ್ದ ಅವರನ್ನು ಕೋರ್ಟ್ ಆದೇಶದ ಬೆನ್ನಲ್ಲೇ ಬಿಡುಗಡೆಗೊಳಿಸಲಾಗಿದೆ.ಡಾ. ಕಫೀಲ್ ಖಾನ್ ಬಂಧನ ಕಾನೂನು ಬಾಹಿರ ಎಂದು ಬಣ್ಣಿಸಿದ್ದ ಅಲಹಾಬಾದ್ ಹೈಕೋರ್ಟ್, ಅವರ ವಿರುದ್ಧದ ಎನ್ ಎಸ್ ಎ ಆರೋಪಗಳನ್ನು ವಜಾ ಮಾಡಿತ್ತು. ಅಲ್ಲದೆ, ಡಾ. ಕಫೀಲ್ ಖಾನ್ ಅವರನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಸರ್ಕಾರಕ್ಕೆ ಆದೇಶಿಸಿತ್ತು.

ಕಫೀಲ್ ಖಾನ್ ರ ಭಾಷಣ ಹಿಂಸೆಯನ್ನು ಪ್ರಚೋದಿಸುತ್ತಿರಲಿಲ್ಲ. ಅದು ರಾಷ್ಟ್ರೀಯ ಏಕತೆ ಮತ್ತು ಜನರ ನಡುವೆ ಭಾವೈಕ್ಯತೆಯನ್ನು ಸಾರುವಂತೆ ಕರೆ ಕೊಡುವಂತಿತ್ತು ಎಂದು ಕೋರ್ಟ್ ಅಭಿಪ್ರಾಯ ಪಟ್ಟಿತ್ತು.

- Advertisement -

ನ್ಯಾಯಾಲಯದ ತೀರ್ಪಿನ ನಂತರವೂ ಜೈಲಿನ ಅಧಿಕಾರಿಗಳು ಡಾ. ಕಫೀಲ್ ಖಾನ್ ಅವರ ಬಿಡುಗಡೆಗೆ ವಿಳಂಬ ನೀತಿ ಅನುಸರಿಸುತ್ತಿದ್ದಾಗ, ಅವರ ಕುಟುಂಬವು ಅಲಹಾಬಾದ್ ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿತ್ತು.

- Advertisement -