ನನ್ನನ್ನು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ಮುಂದುವರೆಯಬಹುದು : ಡಾ ಕಫೀಲ್ ಖಾನ್

Prasthutha|

“‘ರಾಜಧರ್ಮ’ ಮರೆತ ಉತ್ತರ ಪ್ರದೇಶ ಸರಕಾರ ಮಕ್ಕಳಂತೆ ಹಠಮಾರಿತನ ಪ್ರದರ್ಶಿಸುತ್ತಿದೆ”

ಲಖನೌ : ಉತ್ತರ ಪ್ರದೇಶ ಸರಕಾರ ‘ರಾಜಧರ್ಮ’ ಪಾಲಿಸುವುದು ಬಿಟ್ಟು, ಮಕ್ಕಳಂತೆ ಹಠಮಾರಿತನ ಪ್ರದರ್ಶಿಸುತ್ತಿದೆ ಮತ್ತು ಅದು ಇನ್ನೊಂದು ಪ್ರಕರಣದಲ್ಲಿ ನನ್ನನ್ನು ಸಿಲುಕಿಸುವ ಸಾಧ್ಯತೆಯಿದೆ ಎಂದು ಜೈಲಿನಿಂದ ಬಿಡುಗಡೆಗೊಂಡ ಡಾ. ಕಫೀಲ್ ಖಾನ್ ತಿಳಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್ ಆದೇಶದಂತೆ ಕಳೆದ ತಡರಾತ್ರಿ ಮಥುರಾ ಜೈಲಿನಿಂದ ಬಿಡುಗಡೆಗೊಂಡ ಬಳಿಕ, ಖಾನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

- Advertisement -

“ನನ್ನ ಬಿ ಡುಗಡೆಗಾಗಿ ಧ್ವನಿ ಎತ್ತಿದ, ನನ್ನ ಎಲ್ಲ ಹಿತೈಷಿಗಳಿಗೂ ನಾನು ಚಿರಋಣಿಯಾಗಿದ್ದೇನೆ. ಆಡಳಿತವು ಬಿಡುಗಡೆಗೆ ಸಿದ್ಧವಿರಲಿಲ್ಲ. ಆದರೆ, ಜನರ ಆಶೀರ್ವಾದದಿಂದ ಬಿಡುಗಡೆಯಾಗಿದ್ದೇನೆ’’ ಎಂದು ಖಾನ್ ತಿಳಿಸಿದ್ದಾರೆ.

“ರಾಜನಾದವನು ‘ರಾಜಧರ್ಮ’ ಪಾಲಿಸಬೇಕು ಎಂದು ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿ ಹೇಳುತ್ತಾರೆ. ಉತ್ತರ ಪ್ರದೇಶದ ‘ರಾಜ’ ‘ರಾಜಧರ್ಮ’ ಪಾಲಿಸುತ್ತಿಲ್ಲ, ಆದರೆ ಮಕ್ಕಳಂತೆ ಹಠಮಾರಿಯಾಗಿ ವರ್ತಿಸುತ್ತಿದ್ದಾರೆ’’ ಎಂದು ಖಾನ್ ಹೇಳಿದ್ದಾರೆ.

ಬಿಆರ್ ಡಿ ವೈದ್ಯಕೀಯ ಕಾಲೇಜಿನ ಆಕ್ಸಿಜನ್ ವಿವಾದದ ಬಳಿಕ ತಾನು ಮತ್ತು ತಮ್ಮ ಕುಟುಂಬ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂದು ಖಾನ್ ಹೇಳಿದ್ದಾರೆ. ಸದ್ಯಕ್ಕೆ ತಾವು ಬಿಹಾರ ಮತ್ತು ಅಸ್ಸಾಂನಲ್ಲಿ ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡಬೇಕೆಂದು ಬಯಸಿದ್ದೇನೆ ಎಂದು ಅವರು ಹೇಳಿದ್ದಾರೆ.

- Advertisement -