ಮತಾಂಧತೆ ಬಿತ್ತಿದ ಟಿವಿ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ | `ಅಮುಲ್’ ಕಂಪೆನಿಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿಷ್ಕಾರ ಅಭಿಯಾನ

Prasthutha: September 1, 2020

► ಅಮುಲ್ ‘ವೇಸ್ಟ್ಆಫ್ ಇಂಡಿಯಾ’ ಎಂದು ಜರೆದ ಟ್ವಿಟ್ಟರಿಗರು

ನವದೆಹಲಿ: ಸಂಘಪರಿವಾರದ ಚಾನೆಲ್ ಸುದರ್ಶನ್ ಟಿವಿ ನಡೆಸಿದ ಇಸ್ಲಾಂ ವಿರೋಧಿ ಕಾರ್ಯಕ್ರಮವನ್ನು ಬೆಂಬಲಿಸಿದ `ಅಮುಲ್’ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. ಸರ್ಕಾರಿ ಉದ್ಯೋಗಗಳನ್ನು ಮುಸ್ಲಿಮರು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ‘ಯುಪಿಎಸ್ಸಿ ಜಿಹಾದ್’ ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಸುದರ್ಶನ್ ಟಿವಿ ದ್ವೇಷ ಅಭಿಯಾನವನ್ನು ಪ್ರಾರಂಭಿಸಬೇಕಿತ್ತು.

‘ಬಿಂದಾಸ್ ಬಾಲ್’ ಎಂದಾಗಿತ್ತು ಕಾರ್ಯಕ್ರಮದ ಹೆಸರು. ಆಗಸ್ಟ್ 28ರ ಶುಕ್ರವಾರ 8 ಗಂಟೆಗೆ ಕಾರ್ಯಕ್ರಮ ನಿಗಧಿಯಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ  ದೆಹಲಿ ಹೈಕೋರ್ಟ್ ತಡೆ ಹೇರಿತ್ತು. ಜಾಮಿಯಾ ವಿಧ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಜಸ್ಟಿಸ್ ನವೀನ್ ಚಾವ್ಲಾ ಅವರ ಏಕಪೀಠ ತನ್ನ ತೀರ್ಪು ನೀಡಿತ್ತು..

ಇಸ್ಲಾಂ ಧರ್ಮದ ಬಗ್ಗೆ ಬಹಿರಂಗವಾಗಿ ದ್ವೇಷವನ್ನು ಹರಡುವ ಸಂಘಪರಿವಾರದ ಸುದರ್ಶನ್ ಟಿವಿ ನಡೆಸುವ ಕಾರ್ಯಕ್ರಮವನ್ನು ದೆಹಲಿ ಹೈಕೋರ್ಟ್ ನಿರ್ಭಂದಿಸಿದರೂ ಅದೇ ಚಾನೆಲ್ ಗೆ ನಿರಂತರವಾಗಿ ಪ್ರಾಯೋಜಕತ್ವವನ್ನು ನೀಡುತ್ತಿರುವ `ಅಮುಲ್’ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಕರೆಗಳು ಬರುತ್ತಿದೆ. ಇನ್ನು ಮುಂದೆ `ಅಮುಲ್’ ಉಪಯೋಗಿಸುವುದಿಲ್ಲ ಎಂದೂ, ಅದರ ಉತ್ಪನ್ನಗಳನ್ನು ಬಹಿಷ್ಕರಿಸುತ್ತೇವೆ ಎಂದು ಕರೆ ನೀಡುತ್ತಾ ಅನೇಕರು ಮುಂದೆ ಬಂದಿದ್ದಾರೆ.

ಅಮುಲ್ ವಿರುದ್ಧದ ಬಹಿಷ್ಕಾರ ಅಭಿಯಾನದಲ್ಲಿ ಉತ್ಪನ್ನದ `ಭಾರತದ ರುಚಿ’ (Taste of India) ಎಂಬ ಘೋಷಣೆಯನ್ನು ‘ಭಾರತದ ತ್ಯಾಜ್ಯ’(Waste of India) ಎಂದು ಬದಲಾಯಿಸಿ ಅಭಿಯಾನ ನಡೆಸುತ್ತಿದ್ದಾರೆ. ಚಾನೆಲ್ ನ ಸುದ್ದಿಗಳ ವಿರುದ್ದ ಐಪಿಎಸ್ ಅಸೋಶಿಯೇಷನ್ ಕೂಡಾ ಮುಂದೆ ಬಂದಿದೆ. ಸಿವಿಲ್ ಸರ್ವಿಸ್ ಗೆ ಆಯ್ಕೆಯಾದವರನ್ನು ಗುರಿಯಾಗಿಸಿಕೊಂಡು ಸುದರ್ಶನ್ ಟಿವಿಯಲ್ಲಿ ಬಂದ ಸುದ್ಧಿ ಕೋಮುವಾದ ಮತ್ತು ಬೇಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ಉದಾಹರಣೆಯಾಗಿದೆ ಎಂದು ಐಪಿಎಸ್ ಅಸೋಶಿಯೇಷನ್ ಪ್ರತಿಕ್ರಿಯಿದೆ. ಚಾನೆಲ್ ಗೆ ಪ್ರಾಯೋಜಕತ್ವ ನೀಡುವುದನ್ನು ಮರುಪರಿಶೀಲಿಸುವಂತೆ ಯುಕೆ ಮೂಲದ `ಸ್ಟಾಪ್ ಫಂಡಿಗ್ ಹೈಟ್’ ಅಮುಲ್ ಗೆ ತಿಳಿಸಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ