ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಗೆ ಜೈಲಿನಲ್ಲೇ ಮದುವೆಯಾಗಲು ಅನುಮತಿ

Prasthutha|

ಲಂಡನ್: ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ಗೆ ಬ್ರಿಟನ್ ಜೈಲಿನಲ್ಲಿ ಮದುವೆಯಾಗಲು ಅನುಮತಿ ಲಭಿಸಿದೆ.

- Advertisement -

ಅವರು ತನ್ನ ಬಹುಕಾಲದ ಗೆಳತಿ ಸ್ಟೆಲ್ಲಾ ಮೋರಿಸ್ ಅವರೊಂದಿಗೆ ವಿವಾಹವಾಗಲಿದ್ದಾರೆ ಎಂದು ಲಂಡನ್‌ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂಜೆ ಅವರನ್ನು ಬ್ರಿಟನ್ ನ ಬೆಲ್‌ ಮಾರ್ಷ್ ಜೈಲಿನಲ್ಲಿ ಇರಿಸಲಾಗಿದ್ದು, 1983ರ ಮ್ಯಾರೇಜ್ ಆಕ್ಟ್ ಪ್ರಕಾರ ಜೈಲಿನಲ್ಲಿಯೇ ವಿವಾಹವಾಗಲು ಇಬ್ಬರಿಗೂ ಅವಕಾಶ ಕಲ್ಪಿಸಲಾಗಿದೆ.

ಸ್ಟೆಲ್ಲಾ ಮೋರಿಸ್ ದಕ್ಷಿಣ ಆಫ್ರಿಕಾದ ವಕೀಲೆ. 2015 ರಿಂದ ಇಬ್ಬರೂ ಪ್ರೀತಿಸುತ್ತಿದ್ದೇವೆ ಎಂದು ಸ್ಟೆಲ್ಲಾ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಇಬ್ಬರಿಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಆಸ್ಟ್ರೇಲಿಯ ಪ್ರಜೆಯಾಗಿರುವ ಅಸ್ಸಾಂಜೆ 2019 ರಿಂದ ಲಂಡನ್‌ ಜೈಲಿನಲ್ಲಿದ್ದಾರೆ. ವಿಕಿಲೀಕ್ಸ್ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳ ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿದ ಸಂಸ್ಥೆಯಾಗಿದೆ.

- Advertisement -

ಅಸ್ಸಾಂಜೆಯನ್ನು ಹಸ್ತಾಂತರಿಸಲು ಅಮೆರಿಕ ಕೂಡ ಪ್ರಯತ್ನಿಸುತ್ತಿದೆ. ವಿವಿಧ ದಾಖಲೆಗಳನ್ನು ಸೋರಿಕೆ ಮಾಡಿದ್ದಕ್ಕಾಗಿ ಅಸಾಂಜೆ ವಿರುದ್ಧ ಅಮೆರಿಕದಲ್ಲೂ ಹಲವು ಕೇಸು ದಾಖಲಾಗಿವೆ.

ವಿಕಿಲೀಕ್ಸ್ ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳ ದಾಖಲೆಗಳನ್ನು ಬಿಡುಗಡೆ ಮಾಡಿತ್ತು.



Join Whatsapp