ಚೆನ್ನೈಯನ್ನು ಹಜ್ ಕೇಂದ್ರವನ್ನಾಗಿ ಮರು ಸೇರ್ಪಡೆಗೊಳಿಸುವಂತೆ ಪ್ರಧಾನಿಗೆ ಸ್ಟಾಲಿನ್ ಒತ್ತಾಯ

Prasthutha|

ಕೊಯಂಬತ್ತೂರು: ತಮಿಳುನಾಡು ರಾಜಧಾನಿ ಚೆನ್ನೈಯನ್ನು ಹಜ್ ಕೇಂದ್ರವನ್ನಾಗಿ ಮರು ಸೇರ್ಪಡೆಗೊಳಿಸುವಂತೆ ಪ್ರಧಾನಿ ಮೋದಿಯವರನ್ನು ಮುಖ್ಯಮಂತ್ರಿ ಸ್ಟಾಲಿನ್ ಒತ್ತಾಯಿಸಿದ್ದಾರೆ.

- Advertisement -

ಈ ಹಿಂದೆ ಹಜ್ ಸಮಿತಿಯು ಚೆನ್ನೈಯನ್ನು ಹಜ್ ಕೇಂದ್ರದ ನಗರಗಳ ಪಟ್ಟಿಯಿಂದ ತೆಗೆದು ಹಾಕಿತ್ತು.

ತಮಿಳುನಾಡು, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಂದ ಸುಮಾರು 4500 ಹಜ್ ಯಾತ್ರಾರ್ಥಿಗಳು 2019 ರಲ್ಲಿ ಚೆನ್ನೈಯನ್ನು ಹಜ್ ಕೇಂದ್ರವನ್ನಾಗಿ ಬಳಸಿದ್ದರು ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಸ್ಟಾಲಿನ್ ಉಲ್ಲೇಖಿಸಿದ್ದಾರೆ.

- Advertisement -

ಕೇರಳ ಮತ್ತು ಕರ್ನಾಟಕದ ಯಾತ್ರಾರ್ಥಿಗಳು ಕೂಡ ಚೆನ್ನೈಯನ್ನು ಕೇಂದ್ರವನ್ನಾಗಿ ಬಳಸುತ್ತಿದ್ದರು ಅವರು ಒತ್ತಿ ಹೇಳಿದರು.
ಪ್ರಸ್ತುತ ತಮಿಳುನಾಡಿನ ಹಜ್ ಯಾತ್ರಾರ್ಥಿಗಳು ಕೇರಳದ ಕೊಚ್ಚಿಯನ್ನು ಕೇಂದ್ರವನ್ನಾಗಿಸಿದ್ದಾರೆ.

ಮಾತ್ರವಲ್ಲ ಚೆನ್ನೈಯನ್ನು ಮತ್ತೆ ಹಜ್ ಕೆಂದ್ರವನ್ನಾಗಿಸುವಂತೆ ತಮಿಳುನಾಡು, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ನಿಂದ ಒತ್ತಡ ಬಂದಿದೆ. ಹಜ್ ಯಾತ್ರಾರ್ಥಿಗಳಿಗೆ ಆಗುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಚೆನ್ನೈಯನ್ನು ಮತ್ತೆ ಕೇಂದ್ರದ ಪಟ್ಟಿಗೆ ಸೇರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಅವರು ಪ್ರಧಾನಿಗೆ ಮನವಿ ಮಾಡಿದರು.

Join Whatsapp