ಜೋಶಿಮಠ ಪಟ್ಟಣವೇ ನೆಲದಡಿ ಸೇರುವ ಅಪಾಯ: ನಾಸಾ ಫೋಟೋಗಳ ಬಿಡುಗಡೆ

Prasthutha|

ಚಮೋಲಿ: ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಜೋಶಿಮಠ ಪಟ್ಟಣವು ಸಂಪೂರ್ಣ ಭೂಗತವಾಗಿ ಹೋಗುವ ಅಪಾಯವಿದೆ. ಈ ಬಗ್ಗೆ ನಾಸಾದ ಉಪಗ್ರಹ ಚಿತ್ರಗಳು ಬಿಡುಗಡೆಯಾಗಿವೆ.

- Advertisement -

ಭಾರತದ ಭೂ ಪ್ರದೇಶ 4-5 ಕೋಟಿ ವರ್ಷಗಳ ಹಿಂದೆ ಏಷ್ಯಾದ ಭೂತಟ್ಟೆಗೆ ಗುದ್ದಿದ್ದರಿಂದ ಹಿಮಾಲಯ ಹುಟ್ಟಿದೆ ಎನ್ನಲಾಗುತ್ತದೆ. ಇಲ್ಲಿ ಭೂತಟ್ಟೆ ಬಲಗಳ ಎಳೆತವು ಇಡೀ ಉತ್ತರ ಭಾರತವನ್ನು ಭೂಕಂಪನ ವಲಯ ಮಾಡಿದೆ. ನೆಲಜರಿ ಭೂಕುಸಿತ ಮತ್ತು ಹಿಮಪಾತ ಇಲ್ಲಿ ಸಾಮಾನ್ಯ.

ಹಿಂದೆ ಜೋತಿರ್ಮಠ ಎಂದು ಕರೆಯಲ್ಪಡುತ್ತಿದ್ದ ಈಗಿನ ಜೋಶಿ ಮಠವು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿದ್ದು ಭೂಕುಸಿತ ವಲಯ ಎನಿಸಿದೆ. 2007ರ ಅಧ್ಯಯನದಂತೆ ಜೋಶಿಮಠ ಬದರಿನಾಥ ರಸ್ತೆಯು ನೆಲಜರಿ ಪ್ರದೇಶವಾದರೆ ಜೋಶಿಮಠ ಪಟ್ಟಣವು ಹೆಚ್ಚು ಭೂಕುಸಿತದ ಅಪಾಯ ವಲಯವಾಗಿದೆ.

- Advertisement -

ಕಾಡು ಕಡಿ, ಚಾರ್ ಧಾಮ ಹೆದ್ದಾರಿ, ಅವೈಜ್ಞಾನಿಕವಾಗಿ ಬೆಟ್ಟ ನಾಶ ಮತ್ತು ನಗರ ಕಟ್ಟು, ನೀರುಮಿಂಚುರಿ ಅಣೆಕಟ್ಟು ಯೋಜನೆಗಳು ಇಲ್ಲಿ ಭೂಕುಸಿತ ಹೆಚ್ಚಾಗಲು ಮುಖ್ಯ ಕಾರಣ ಎಂದು ತಜ್ಞರು ಹೇಳಿದ್ದಾರೆ. ಅದಲ್ಲದೆ ಸ್ಫೋಟ ಮತ್ತು ಕೊರೆಯುವಿಕೆ, ನೆಲ ಪಡಿ ಹಾಗೂ ಭೂ ಅಸ್ಥಿರತೆ ಕೂಡ ಕಾರಣ. ಬಿಜೆಪಿಯವರಂತೂ ತಮ್ಮ ಪ್ರವಾಸೋದ್ಯಮ ಬೆಳೆಸಲು ಇಲ್ಲಿ ಮಾಡುತ್ತಿರುವ ಪ್ರಕೃತಿ ನಾಶ ಲೆಕ್ಕಕ್ಕೆ ಸಿಗದ್ದು ಎಂದು ತಜ್ಞರು ಹೇಳಿದ್ದಾರೆ.

Join Whatsapp