ಸುಳ್ಳು ಸುದ್ದಿ ಹರಡುತ್ತಿರುವ ಆರು ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಕಠಿಣ ಕ್ರಮ

Prasthutha|

ಹೊಸದಿಲ್ಲಿ: ಸುಳ್ಳು ಸುದ್ದಿ ಹರಡುವ ಮತ್ತು ಭಾರತ ವಿರೋಧಿ ಅಂಶಗಳನ್ನು ಪ್ರಸಾರ ಮಾಡುತ್ತಿರುವ ಆರೋಪದಲ್ಲಿ ಯೂಟ್ಯೂಬ್ ಚಾನೆಲ್ ಗಳ  ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

- Advertisement -

ಸುಮಾರು 20 ಲಕ್ಷ ಸಬ್ಸ್ಕ್ರೈಬರ್ ಗಳಿಗೆ ಸುಳ್ಳು ಸುದ್ದಿ ಹರಡುತ್ತಿರುವ ಆರು ಯೂಟ್ಯೂಬ್ ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ‘ಪ್ರೆಸ್ ಇನ್ಫರ್ಮೇಷನ್ ಬ್ಯೂರೋ’ದ  ಫ್ಯಾಕ್ಟ್ ಚೆಕ್ ವಿಭಾಗ ಮುಂದಾಗಿದೆ.

ಆರು ಚಾನೆಲ್ ಗಳು ಸುಳ್ಳುಸುದ್ದಿ ಹರಡುತ್ತಿವೆ ಎಂದು ಕಳೆದ ತಿಂಗಳು ಪಿಐಬಿಯ ಸತ್ಯಶೋಧನಾ ಘಟಕ ಬಹಿರಂಗಪಡಿಸಿದ ಬಳಿಕ  ಇವುಗಳನ್ನು ರದ್ದುಪಡಿಸುವಂತೆ ಸರ್ಕಾರ ಯೂ-ಟ್ಯೂಬ್ ಸಾಮಾಜಿಕ ಜಾಲತಾಣ ಕಂಪನಿಗೆ ಕೋರಿಕೆ ಸಲ್ಲಿಸಿತ್ತು.

- Advertisement -

ಸುಮಾರು 5.57 ಲಕ್ಷ ಸಬ್ಸ್ಕ್ರೈಬರ್ ಗಳನ್ನು ಹೊಂದಿರುವ ನೇಷನ್ ಟಿವಿ, ಸಂವಾದ ಟಇವಿ (10.9 ಲಕ್ಷ ಗ್ರಾಹಕರು), ಸರೋಕಾರ್ ಭಾರತ್ (21100), ನೇಷನ್24 (25,400), ಸ್ವರ್ಣಿಮ್ ಭಾರತ್ (6079) ಮತ್ತು ಸಂವಾದ ಸಮಾಚಾರ (3.46 ಲಕ್ಷ)  ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಆರು ಚಾನೆಲ್ ಗಳು ಸುಪ್ರೀಂಕೋರ್ಟ್, ಚುನಾವಣೆಗಳು  ಮತ್ತು ಸಂಸತ್ ನಡವಳಿಕೆಗಳ ಬಗ್ಗೆ ಹಾಗೂ ಒಟ್ಟಾರೆ ಸರ್ಕಾರದ ಬಗ್ಗೆ ಸುಳ್ಳು ಸುದ್ದಿಯನ್ನು ಹರಡುತ್ತಿವೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Join Whatsapp