ಸಂಜ್ಞಾ ಭಾಷೆ ಕಲಿಸುತ್ತಿರುವ 5ರ ಪೋರ!

Prasthutha|

ಜೋರ್ಡಾನ್: ಯಾವ ವಯಸ್ಸಿನಲ್ಲೂ ಕಲಿಯಬಹುದು, ಆದರೆ ಕಲಿಸಲು ಸಾಧ್ಯವಿದೆಯೇ? ಜೋರ್ಡಾನ್ ನ ಈ ಪೋರ ಔಸ್ ಔದ್ ಉತ್ತಮ ಶಿಕ್ಷಕರಾಗಲು ವಯಸ್ಸು ಸಮಸ್ಯೆಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾನೆ. ಐದು ವರ್ಷದ ಔಸ್ ಔದ್ ಈಗ ಜೋರ್ಡಾನ್ ನ ಅತ್ಯಂತ ಚಿಕ್ಕ ಸಂಜ್ಞಾ ಭಾಷಾ ಶಿಕ್ಷಕನಾಗಿದ್ದಾನೆ.

- Advertisement -

ಯೂಟ್ಯೂಬ್ ವೀಡಿಯೊಗಳ ಮೂಲಕ ಪ್ರಸಿದ್ಧನಾಗಿರುವ ಔಸ್ ಔದ್ ನನ್ನು ತಂದೆ ಅಶ್ರಫ್ ಯುವ ಸೆಲೆಬ್ರಿಟಿ ಎಂದು ಬಣ್ಣಿಸಿದ್ದಾರೆ. ಪ್ರಪಂಚದಾದ್ಯಂತ ಫಾಲೋವರ್ಸ್ ಗಳನ್ನು ಹೊಂದಿರುವ ಔಸ್ ಔದ್ ನ ವೀಡಿಯೊಗಳು ಸಂಜ್ಞಾ ಭಾಷೆಯನ್ನು ಸುಲಭವಾಗಿ ಕಲಿಯಲು ಸಹಾಯ ಮಾಡುತ್ತದೆ. ಈ ಬಾಲ ಶಿಕ್ಷಕನ ತರಗತಿಗಳು ತುಂಬಾ ಉತ್ಸಾಹಭರಿತ ಮತ್ತು ಆನಂದದಾಯಕವಾಗಿದ್ದು, ಶ್ರವಣ ಶಕ್ತಿಗಳನ್ನು ಕಳೆದುಕೊಂಡಿರುವ ತನ್ನ ಅಜ್ಜ ಮತ್ತು ಅಜ್ಜಿಯೊಂದಿಗೆ ಸಂವಹನ ನಡೆಸಲು ಔಸ್ ಔದ್ ಸಂಜ್ಞಾ ಭಾಷೆಯನ್ನು ಕಲಿತಿದ್ದಾನೆ.

- Advertisement -

ಶ್ರವಣ ಶಕ್ತಿಯನ್ನು ಕಳೆದುಕೊಂಡವರೊಂದಿಗೆ ಸಂವಹನ ನಡೆಸಲು ಜನರಿಗೆ ಅನುವು ಮಾಡಿಕೊಡಲು ಈಗ ಈ ವೀಡಿಯೊಗಳನ್ನು ಮಾಡುತ್ತಿದ್ದೇನೆ ಎಂದು ಈ ಪೋರ ಹೇಳುತ್ತಾನೆ. ಔಸ್ ಔದ್ ನ ತಂದೆ ಅಶ್ರಫ್ ಸಂಜ್ಞಾ ಭಾಷಾ ತಜ್ಞರಾಗಿದ್ದು, ಮಗನ ಉತ್ಸಾಹ ಮತ್ತು ಸಂಜ್ಞಾ ಭಾಷೆಯನ್ನು ಕರಗತ ಮಾಡಿಕೊಳ್ಳುವ ಬಯಕೆಯನ್ನು ನೋಡುವಾಗ ತನ್ನ ಬಾಲ್ಯವನ್ನು ನೆನಪಿಸುತ್ತದೆ ಎಂದು ಔಸ್ ಔದ್ ನ ತಂದೆ ಹೇಳುತ್ತಾರೆ. ಈ ಕ್ಷೇತ್ರದಲ್ಲಿ ತನ್ನ ಮಗನಿಗೆ ಉಜ್ವಲ ಭವಿಷ್ಯವಿದೆ ಎಂದೂ ಅವರು ಹೇಳುತ್ತಾರೆ.

ವೀಡಿಯೊ ನೋಡಿ…

Join Whatsapp