ದಕ್ಷಿಣ ಆಫ್ರೀಕಾದಲ್ಲಿ ಕೊರೋನಾ ಮೂರನೆ ಅಲೆ ಆರಂಭ

Prasthutha|

ಕೊರೋನ ಮಹಾ ಸಾಂಕ್ರಮಿಕ ಜಗತ್ತಿನಾದ್ಯಂತ ಒಂದನೇ ಮತ್ತು ಎರಡನೇ ಅಲೆ ರೂಪದಲ್ಲಿ ಹರಡಿ ಇದೀಗ ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ 3 ನೇ ಅಲೆಯ ಆರ್ಭಟ ಆರಂಭವಾಗಿದೆ. ದಕ್ಷಿಣ ಅಫ್ರಿಕಾದ ರಾಷ್ಟ್ರೀಯ ವೈದ್ಯಕೀಯ ಸಂಸ್ಥೆ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಕಮ್ಯುನಿಕೆಬಲ್‌ ಡಿಸೀಸಸ್‌ (NICD) ಕೊರೋನಾ ಮೂರನೇ ಆಲೆ ಆರಂಭವಾಗಿರುವುದರ ಬಗ್ಗೆ ಖಚಿತಪಡಿಸಿದೆ.

- Advertisement -

ದಕ್ಷಿಣ ಆಫ್ರೀಕಾದಲ್ಲಿ ಕಳೆದ 7 ದಿನಗಳಿಂದ ದೇಶದಲ್ಲಿ ಕೊರೋನಾ ಸೋಂಕಿತರ ಪ್ರಮಾಣದಲ್ಲಿ ಸತತ ಏರಿಕೆಯಾಗುತ್ತಿದೆ. ಕೋವಿಡ್‌ ಪಾಸಿಟಿವಿಟಿಯ ಪ್ರಮಾಣ 15.7% ಗೆ ತಲುಪಿದೆ. ದೇಶಾದ್ಯಂತ ಈ ಸಂಬಂಧ ಕಟ್ಟೆಚ್ಚರ ವಹಿಸಲಾಗಿದೆ ಎಂದು ಎನ್‌ಐಸಿಡಿಯ ತಜ್ಞರು ತಿಳಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ 844 ಜನರು ಕೋವಿಡ್‌ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೊತೆಗೆ 127 ಜನರು ಕಳೆದ 24 ಗಂಟೆಯಲ್ಲಿ ಕೊರೋನಾ ಸೋಂಕಿನ ಪರಿಣಾಮವಾಗಿ ಮೃತಪಟ್ಟಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಕೋವಿಡ್‌ ಮೂರನೇ ಅಲೆಯು ಹಿಂದಿನ ಎರಡನೇ ಅಲೆಗಿಂತಲೂ ತೀವ್ರವಾಗಿರುವುದು ಕಂಡುಬಂದಿದೆ. ಕಳೆದ ಸಲಕ್ಕಿಂತ 30% ಹೆಚ್ಚು ವೇಗವಾಗಿ ಸೋಂಕು ಹರಡುತ್ತಿದೆ ಎಂದು ಎಂದು ದಕ್ಷಿಣ ಆಫ್ರಿಕಾದ ಎನ್‌ಐಸಿಡಿ ವಿಜ್ಞಾನಿಗಳು ದಕ್ಷಿಣ ಆಫ್ರಿಕಾ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಇನ್ನು ಈ ಬಗ್ಗೆ ಎಚ್ಚೆತ್ತುಕೊಂಡಿರುವ ದಕ್ಷಿಣ ಆಫ್ರಿಕಾ ಸರ್ಕಾರವು ಜಗತ್ತಿನ ಇತರ ದೇಶಗಳಿಗೆ ಹೋಗುವ ಮತ್ತು ಹೊರಗಡೆಯಿಂದ ಬರುವ ಪ್ರಯಾಣಿಕರನ್ನು ಕಡ್ಡಾಯ ಕೊರೋನ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಂಡಿದೆ. ನೆರೆಯ ರಾಷ್ಟ್ರಗಳಿಗೆ ಮತ್ತು ಜಗತ್ತಿನ ಇತರ ರಾಷ್ಟ್ರಗಳಿಗೆ ಕೊರೋನಾ ಮೂರನೆಯ ಅಲೆಯ ಕುರಿತಾಗಿ ದಕ್ಷಿಣ ಆಫ್ರಿಕಾ ಸರ್ಕಾರ ಎಚ್ಚರಿಕೆಯನ್ನು ನೀಡಿದೆ.

Join Whatsapp