ಹರೇಕಳದಲ್ಲಿ SDPI ಸದಸ್ಯತ್ವ ಅಭಿಯಾನ

Prasthutha: December 2, 2021

ಕೊಣಾಜೆ: SDPI ಹರೇಕಳ ಗ್ರಾಮ ಸಮಿತಿ ಅಧೀನದಲ್ಲಿ ಸದಸ್ಯತ್ವ ಅಭಿಯಾನ (JOIN SDPI CAMPAIGN) ಹರೇಕಳದ ಉಲ್ಲಾಸ್ ನಗರದಲ್ಲಿ ನಡೆಯಿತು.


‘ಉದಾತ್ತ ರಾಜಕೀಯಕ್ಕಾಗಿ, ಸದೃಢ ಸಮಾಜ ನಿರ್ಮಾಣಕ್ಕಾಗಿ SDPI ಸೇರಿರಿ’ ಎಂಬ ಘೋಷವಾಕ್ಯದೊಂದಿಗೆ ನಡೆದ ಸಮಾರಂಭದಲ್ಲಿ SDPI ಹರೇಕಳ ಗ್ರಾಮ ಸಮಿತಿ ಇದರ ಅಧ್ಯಕ್ಷರು ಹಾಗು ಹರೇಕಳ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಬಶೀರ್ ಅವರು ಅಧ್ಯಕ್ಷತೆ ವಹಿಸಿದ್ದರು.


ಸಮಾರಂಭದಲ್ಲಿ SDPI ದ.ಕ ಜಿಲ್ಲಾ ಅಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಪ್ರಾಸ್ತಾವಿಕ ಭಾಷಣ ಮಾಡಿದರು.


ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ SDPI ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಕೆಸಿ ರೋಡ್ ಭಾರತದ ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ಭಾರತದ ರಾಜಕೀಯ ಚಿತ್ರಣದ ಬಗ್ಗೆ ತರಗತಿ ಮಂಡಿಸಿದರು.


SDPI ಕ್ಯಾಡೇರ್ ಅಥವಾ SDPI ಕಾರ್ಯಕರ್ತ ಯಾರು ಎಂಬ ವಿಷಯದ ಬಗ್ಗೆ SDPI ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಶ್ರಫ್ ಮಂಚಿ ಮಾತನಾಡಿದರು.

ನಂತರ ಹರೇಕಳ ಗ್ರಾಮ ವ್ಯಾಪ್ತಿಯ ಫರೀದ್ ನಗರ, ನ್ಯೂಪಡ್ಪು, ಐಕು, ಉಲ್ಲಾಸ್ ನಗರ, ಮಲಾರ್, ಆಲಡ್ಕ, ದೇರಿಕಟ್ಟೆ, ಬೈತಾರ್ ಪ್ರದೇಶದ ಹಿರಿಯರು ಸೇರಿದಂತೆ ಹಲವು ಯುವಕರು ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ಎಸ್ಡಿಪಿಐ ಪಕ್ಷದ ದ್ವಜವನ್ನು ಎತ್ತಿ ಹಿಡಿಯುವ ಮೂಲಕ ಪಕ್ಷದ ಅಧೀಕೃತ ಸದಸ್ಯತ್ವವನ್ನು ಪಡೆದರು.


ಕಾರ್ಯಕ್ರಮದ ಕೊನೆಯಲ್ಲಿ SDPI ಹರೇಕಳ ಗ್ರಾಮ ಸಮಿತಿ ವತಿಯಿಂದ ಜಿಲ್ಲಾಧ್ಯಕ್ಷರಾದ ಅಬೂಬಕರ್ ಕುಳಾಯಿ, ಜಿಲ್ಲಾ ಸಮಿತಿ ಸದಸ್ಯರಾದ ಅಶ್ರಫ್ ಕೆಸಿ ರೋಡ್, ಕ್ಷೇತ್ರ ಸಮಿತಿ ಸದಸ್ಯರಾದ ಅಶ್ರಫ್ ಮಂಚಿ ಮತ್ತು ಗ್ರಾಮ ಸಮಿತಿ ಅಧ್ಯಕ್ಷರಾದ ಅಬ್ದುಲ್ ಬಶೀರ್ ಇವರನ್ನು ಸನ್ಮಾನಿಸಲಾಯಿತು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!