JNU ಉಪಕುಲಪತಿ ಮಾಡಿರುವ ನೇಮಕಾತಿ ಅನಧಿಕೃತ: ದೆಹಲಿ ಹೈಕೋರ್ಟ್

Prasthutha|

ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಉಪಕುಲಪತಿಗಳು ವಿವಿಧ ಕೇಂದ್ರಗಳಿಗೆ ಒಂಬತ್ತು ಮಂದಿ ಅಧ್ಯಕ್ಷರನ್ನು ಅನಧಿಕೃತವಾಗಿ ನೇಮಿಸಿದ್ದಾರೆ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.

- Advertisement -

ಪ್ರಸ್ತುತ ಉಪಕುಲಪತಿಗಳಿಗೆ ಅಧ್ಯಕ್ಷರನ್ನು ನೇಮಿಸುವ ಅಧಿಕಾರವನ್ನು ನೀಡಲಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
9 ವಿಶೇಷ ಕೇಂದ್ರಗಳಿಗೆ ಅಧ್ಯಕ್ಷರನ್ನು ನೇಮಿಸುವ ಅಧಿಕಾರವನ್ನು ವಿಸಿ ಜಗದೇಶ್ ಕುಮಾರ್ ಅವರು ಚಲಾಯಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಈ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿದ ನ್ಯಾಯಾಲಯ ಪ್ರಮುಖ್ಯ ನಿರ್ಧಾರ ತೆಗೆಯದಂತೆ ಉಪಕುಲಪತಿಯನ್ನು ನಿರ್ಬಂಧಿಸಿದೆ.

- Advertisement -

ಪ್ರೊಫೆಸರ್ ಅತುಲ್ ಸೂದ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಜೀವ್ ಶಕ್ಧರ್ ನೇತೃತ್ವದ ಏಕ ಸದಸ್ಯ ಪೀಠ, ನೇಮಕಾತಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಮಾತ್ರವಲ್ಲ ಉಪಕುಲಪತಿಯವರು ವಿಶ್ವವಿದ್ಯಾಲಯ ಕಾಯ್ದೆ 18(2) ಸಿ (I) ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

Join Whatsapp