ಜನತಾ ಕಾಂಗ್ರೆಸ್ ಶಾಸಕ ದೇವವ್ರತ ಸಿಂಗ್ ಹೃದಯಾಘಾತದಿಂದ ನಿಧನ

Prasthutha|

ರಾಯ್​ಪುರ್:  ರಾಜನಂದಗಾಂವ್ ಕ್ಷೇತ್ರದ ಶಾಸಕ ದೇವವ್ರತ ಸಿಂಗ್ (52) ಹೃದಯಾಘಾತದಿಂದಾಗಿ ನಿಧನರಾಗಿದ್ದಾರೆ.

- Advertisement -

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತಾ ಕಾಂಗ್ರೆಸ್ ​​ನಿಂದ ಸ್ಪರ್ಧಿಸಿ ಗೆಲುವು ದಾಖಲಿಸಿದ್ದರು.

ತಡರಾತ್ರಿ 3 ಗಂಟೆ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತಾದರೂ ಅಷ್ಟರಲ್ಲಾಗಲೇ ಅವರು ಅಸುನೀಗಿದ್ದರು ಎಂದು ತಿಳಿದುಬಂದಿದೆ.

- Advertisement -

ಇದಕ್ಕೂ ಮೊದಲು ಅವರು ಕಾಂಗ್ರೆಸ್​ನಲ್ಲಿದ್ದು, 2018ರಲ್ಲಿ ಮಾಜಿ ಸಿಎಂ ಅಜಿತ್ ಜೋಗಿಯ ಜೆಸಿಸಿ ಪಕ್ಷ ಸೇರ್ಪಡೆಯಾಗಿದ್ದರು. ರಾಜನಂದಗಾಂವ್ ಶಾಸಕನ ಅಕಾಲಿಕ ಮರಣಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.

Join Whatsapp