ಜಿಯೋ ಹ್ಯಾಪಿ ನ್ಯೂ ಇಯರ್ 2023 ಪ್ಲಾನ್: ಬಂಪರ್ ಕೊಡುಗೆ

Prasthutha|

ಬೆಂಗಳೂರು: ಜಿಯೋ ಪ್ರತಿ ವರ್ಷದಂತೆ ಈ ಹೊಸ ವರ್ಷದಲ್ಲೂ ರಿಲಯನ್ಸ್ ಜಿಯೋ ಹೊಸ ಹ್ಯಾಪಿ ನ್ಯೂ ಇಯರ್ 2023 ಪ್ಲಾನ್ ಅನ್ನು ರೂ 2023ಕ್ಕೆ ಬಿಡುಗಡೆ ಮಾಡಿದೆ.

- Advertisement -

2023 ರೂ. ಬೆಲೆಯ ಈ ಹೊಸ ಜಿಯೋ ಹ್ಯಾಪಿ ನ್ಯೂ ಇಯರ್ ಯೋಜನೆಯು ಅನಿಯಮಿತ ಕಾಲಿಂಗ್ ಮತ್ತು 252 ದಿನಗಳ ಲ್ಯಾಲಿಡಿಟಿಯೊಂದಿಗೆ ನಿತ್ಯ  2.5GB ಡೇಟಾವನ್ನು ನೀಡುತ್ತದೆ.

 2023 ರೂ. ಪ್ಲಾನ್ ಈಗ Jio.com ನಲ್ಲಿ ಲಭ್ಯವಿದೆ ಮತ್ತು ಯೋಜನೆಗೆ ಚಂದಾದಾರರಾಗಲು ಬಳಕೆದಾರರು MyJio ಅಪ್ಲಿಕೇಶನ್ ಅಥವಾ Google Pay ಮತ್ತು PhonePe ಸೇರಿದಂತೆ ಯಾವುದೇ ಮೊಬೈಲ್ ರೀಚಾರ್ಜ್ ಪ್ಲಾಟ್ ಫಾರ್ಮ್’ನಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಬಹುದು.

- Advertisement -

ಹೊಸ ಜಿಯೋ ಹ್ಯಾಪಿ ನ್ಯೂ ಇಯರ್ ಪ್ಲಾನ್ 252 ದಿನಗಳ ಮಾನ್ಯತೆ (ವ್ಯಾಲಿಡಿಟಿ) ಯೊಂದಿಗೆ ಬರುತ್ತದೆ ಮತ್ತು 9 ತಿಂಗಳವರೆಗೆ ಅನ್ ಲಿಮಿಟೆಡ್ ಕರೆಯನ್ನು ನೀಡುತ್ತದೆ. ದಿನಕ್ಕೆ 2.5GB ಡೇಟಾವನ್ನು ಸಹ ದೊರೆಯಲಿದೆ. ಇದು ಒಟ್ಟಾರೆಯಾಗಿ ಸುಮಾರು 630GB ಡೇಟಾವನ್ನು ಬಳಕೆ ನೀಡುತ್ತದೆ. ಹೆಚ್ಚುವರಿಯಾಗಿ ರೂ 2023 ಯೋಜನೆಯು ಜಿಯೋ ಅಪ್ಲಿಕೇಶನ್’ಗಳಿಗೆ ಪೂರಕ ಚಂದಾದಾರಿಕೆಯನ್ನು ಮತ್ತು ದಿನಕ್ಕೆ 100 SMS ಅನ್ನು ನೀಡುತ್ತದೆ. ಹೊಸ ವರ್ಷದ ಕೊಡುಗೆಯ ಅಡಿಯಲ್ಲಿ, ಜಿಯೋ ಹೊಸ ಚಂದಾದಾರರಿಗೆ ಕಾಂಪ್ಲಿಮೆಂಟರಿ ಪ್ರೈಮ್ ಸದಸ್ಯತ್ವವನ್ನು ಸಹ ಒದಗಿಸುತ್ತಿದೆ.

ಹೊಸದಾಗಿ ಪ್ರಾರಂಭಿಸಲಾದ ಯೋಜನೆಗೆ ಹೆಚ್ಚುವರಿಯಾಗಿ, ಈಗಾಗಲೇ ಅಸ್ತಿತ್ವದಲ್ಲಿರುವ ರೂ 2999 ಯೋಜನೆಗೆ ಹೆಚ್ಚುವರಿ ಪ್ರಯೋಜನಗಳನ್ನು ಸೇರಿಸಿದೆ. ಅಸ್ತಿತ್ವದಲ್ಲಿರುವ ಕೊಡುಗೆಗಳ ಜೊತೆಗೆ, ರೂ 2999 ಯೋಜನೆಯಲ್ಲಿ 75GB ಹೆಚ್ಚುವರಿ ಹೈಸ್ಪೀಡ್ ಡೇಟಾವನ್ನು ಮತ್ತು 23 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತದೆ. 75GB ಹೆಚ್ಚುವರಿ ಡೇಟಾ ಮತ್ತು 23 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ವೋಚರ್’ಗಳನ್ನು ಪೋಸ್ಟ್ ಗೋ-ಲೈವ್ ಮೂಲಕ ಅದೇ ದಿನದ ರೀಚಾಜ್’ಗಳಲ್ಲಿ ಒದಗಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು.

ರೂ. 2999 ಪ್ಲಾನ್ 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ ಮತ್ತು ಒಟ್ಟು 912.5GB ಡೇಟಾವನ್ನು ನೀಡುತ್ತದೆ, ಇದು ದಿನಕ್ಕೆ 2.5GB ಹೈ ಸ್ಪೀಡ್ ಡೇಟಾದೊಂದಿಗೆ ಹೆಚ್ಚುವರಿಯಾಗಿ, ಅನಿಯಮಿತ ಧ್ವನಿ ಕರೆ, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್’ಗಳಿಗೆ ಪೂರಕ ಚಂದಾದಾರಿಕೆಯನ್ನು ನೀಡುತ್ತದೆ. ಜಿಯೋ ಆಫರ್ ಸಂಬಂಧಿತ ವಿವರಗಳು Jio.com ಅಥವಾ MyJio ನಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp