ಜಾರ್ಖಂಡ್: ಮಾಸ್ಕ್ ಧರಿಸದ ಸೈನಿಕನಿಗೆ ಥಳಿಸಿದ್ದ ಮೂವರು ಪೊಲೀಸರ ಅಮಾನತು

Prasthutha|

ರಾಂಚಿ: ಮಾಸ್ಕ್ ಧರಿಸದ ಸೈನಿಕನನ್ನು ಥಳಿಸಿದ್ದ ಜಾರ್ಖಂಡ್ ನ ಛತ್ರ ಜಿಲ್ಲೆಯ ಕರ್ಮಚೌಕ್ ಪ್ರದೇಶದ ಮಯೂರ್‌ಹಂಡ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಮೂವರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಬೈಕ್ ನಲ್ಲಿ ಬರುತ್ತಿದ್ದ ಸೈನಿಕನನ್ನು ತಡೆದು ಪೊಲೀಸರು ಥಳಿಸಿತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

- Advertisement -

ಪೊಲೀಸರ ಈ ಕೃತ್ಯದ ವಿರುದ್ಧ ರಾಜ್ಯದಲ್ಲಿ ಭಾರೀ ಪ್ರತಿಭಟನೆಗಳೂ ನಡೆದಿತ್ತು. ಛತ್ರ ಎಸ್ಪಿ ರಾಕೇಶ್ ರಂಜನ್ ಸೂಚನೆ ಮೇರೆಗೆ ಈ ಘಟನೆಗೆ ಸಂಬಂಧಿಸಿದಂತೆ ಡಿವೈಎಸ್ಪಿ ತನಿಖೆ ನಡೆಸಿದ್ದರು.

ಮಾಸ್ಕ್ ಧರಿಸದ ಯೋಧನ ವಿರುದ್ಧ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಲಸಿಕೆ ಪರೀಕ್ಷೆಯ ನೇತೃತ್ವ ವಹಿಸಿದ್ದ ಬ್ಲಾಕ್ ಅಭಿವೃದ್ಧಿ ಅಧಿಕಾರಿಯಿಂದ ವರದಿ ಕೇಳಿದ್ದು, ಅದರಂತೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ತಿಳಿಸಿದ್ದಾರೆ.



Join Whatsapp