ವಾರದಲ್ಲಿ 3 ದಿನ ಪತ್ನಿ ಜೊತೆ, 3 ದಿನ ಗೆಳತಿ ಜೊತೆ, ಒಂದು ದಿನ ರಜೆ! । ಏನಿದು ಜಾರ್ಖಂಡ್ ಪೊಲೀಸರ ವಿಚಿತ್ರ ತೀರ್ಮಾನ?

Prasthutha|

ರಾಂಚಿ : ಗಂಡ, ಹೆಂಡತಿ ಮತ್ತು ಗೆಳತಿಯ ನಡುವಿನ ವಿವಾಹೇತರ ಸಂಬಂಧ ವಿವಾದವನ್ನು ಬಗೆಹರಿಸುವ ಸಲುವಾಗಿ ಜಾರ್ಖಂಡ್ ಪೊಲೀಸರು ನೀಡಿರುವ ಪರಿಹಾರವೊಂದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಗೆ ಮೂರು ದಿನಗಳ ಕಾಲ ಪತ್ನಿ ಜೊತೆ, ಮೂರು ದಿನಗಳ ಕಾಲ ಗೆಳತಿ ಜೊತೆ ಮತ್ತು ಒಂದು ದಿನ ರಜೆ ಎಂದು ಪೊಲೀಸರು ನಿರ್ಧರಿಸಿರುವುದು ಸುದ್ದಿಯಾಗಿದೆ.

- Advertisement -

ರಾಂಚಿಯ ನಿವಾಸಿ ರಾಜೇಶ್‌ ಮಹತೋ ತನಗೆ ಹೆಂಡತಿ ಮತ್ತು ಒಂದು ಮಗು ಇದ್ದರೂ, ಅದನ್ನು ಮರೆಮಾಚಿ, ಅವಿವಾಹಿತ ಎಂದು ಸುಳ್ಳು ಹೇಳಿ ಯುವತಿಯೊಬ್ಬಳನ್ನು ಪ್ರೀತಿಸಿ ಅವಳ ಜೊತೆ ಪರಾರಿಯಾಗಿದ್ದನು. ಈ ಬಗ್ಗೆ ಹೆಂಡತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಳು. ಅದರೊಂದಿಗೆ ಯುವತಿಯ ಅಪಹರಣವಾಗಿದೆ ಎಂದು ಕೂಡಾ ದೂರು ದಾಖಲಾಗಿತ್ತು. ಆ ಹೊತ್ತಿಗಾಗಲೆ ರಾಜೇಶ್ ಆ ಯುವತಿಯನ್ನೂ ಮದುವೆಯಾಗಿದ್ದನು.

ಎರಡು ಕಡೆಯವರು ಪೊಲೀಸ್ ಠಾಣಾ ಆವರಣದಲ್ಲಿ ಕಿತ್ತಾಡಿ ಹೊಯಿಕೈ ಮಾಡಿಕೊಂಡಿದ್ದಾರೆ. ಸಮಸ್ಯೆಯನ್ನು ಬಗೆಹರಿಸಲು ಪೊಲೀಸರು ವಾರದ ಮೂರು ದಿನ ಹೆಂಡತಿ ಜೊತೆ, ಮೂರು ದಿನ ಗೆಳತಿ ಜೊತೆ ಇರುವಂತೆ ಮತ್ತು ಒಂದು ದಿನ ರಜೆ ತೆಗೆದುಕೊಳ್ಳುವಂತೆ ಹೇಳಿದ್ದಾರೆ ಎನ್ನಲಾಗಿದೆ.  

- Advertisement -

ಸ್ವಾರಸ್ಯಕರವೆಂದರೆ ಇತ್ತಂಡಗಳೂ ಈ ತೀರ್ಪನ್ನು ಒಪ್ಪಿಕೊಂಡು ಕಡತಕ್ಕೆ ಸಹಿಹಾಕಿದ್ದಾರೆ. ಹೀಗಾಗಿ, ಇದೀಗ ಇಬ್ಬರು ಹೆಂಡಿರ ಗಂಡನಾಗಿ ರಾಜೇಶ್ ಇಬ್ಬರೊಂದಿಗೂ ಸಹಬಾಳ್ವೆ ನಡೆಸಬೇಕಾಗಿದೆ.



Join Whatsapp