ಲೈಂಗಿಕ ಕಿರುಕುಳ ಆರೋಪ | ಮಾಜಿ ಸಿಜೆಐ ನ್ಯಾ. ಗೊಗೊಯ್ ದೋಷಮುಕ್ತ; ತನಿಖೆ ಕ್ಲೋಸ್

Prasthutha|

ನವದೆಹಲಿ : ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿದ್ದ ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊ=ಯ್ ವಿರುದ್ಧದ ಪ್ರಕರಣ ಖುಲಾಸೆಗೊಂಡಿದೆ. ಆ ಮೂಲಕ ನ್ಯಾ. ರಂಜನ್ ಗೊಗೊಯ್ ಅವರಿಗೆ ಕ್ಲೀನ್ ಚಿಟ್ ಸಿಕ್ಕಂತಾಗಿದೆ.

- Advertisement -

ನ್ಯಾ. ಎಸ್.ಎ. ಬೋಬ್ಡೆ ನೇತೃತ್ವದ ಮೂವರು ಸದಸ್ಯರ ಸಮಿತಿ, ಈ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿ, ನ್ಯಾ. ಗೊಗೊಯ್ ಅವರನ್ನು ದೋಷಮುಕ್ತಗೊಳಿಸಿದೆ.

ನ್ಯಾ. ಗೊಗೊಯ್ ವಿರುದ್ಧ ಷಡ್ಯಂತ್ರವಿತ್ತು ಮತ್ತು ಆ ವಿಚಾರವನ್ನು ತೆಗೆದು ಹಾಕುವುದಕ್ಕೆ ಸಾಧ್ಯವಿಲ್ಲವೆಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ವಾಟ್ಸಪ್ ಮತ್ತು ಇತರೆ ಎಲೆಕ್ಟ್ರಾನಿಕ್ಸ್ ದಾಖಲೆಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ಕೋರ್ಟ್ ತಿಳಿಸಿದೆ.

Join Whatsapp