ಒಮಾನಿನ ಶೇಖ್ ಪುರಸ್ಕೃತ ಏಕೈಕ ಹಿಂದೂ ಕನಕ್ಸಿ ಖಿಮ್ಜಿ ನಿಧನ

Prasthutha|

- Advertisement -

ಒಮಾನಿನ ಹಿರಿಯ ಉದ್ಯಮಿ ಮತ್ತು ಖಿಮ್ಜಿ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷರಾದ 85ವರ್ಷದ ಕನಕ್ಸಿ ಗೋಖಲ್‌ ದಾಸ್ ಖಿಮ್ಜಿ ನಿಧನರಾಗಿದ್ದಾರೆ.  ಒಮಾನ್‌ನ ಭಾರತೀಯ ಸಮುದಾಯದ ಪ್ರವರ್ತಕರು ಎಂದು ವರ್ಣಿಸಬಹುದಾದ ಇವರು ಒಮಾನ್ ಮತ್ತು ಭಾರತದ ನಡುವೆ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಕಳೆದ ಐದು ದಶಕಗಳಿಂದ ಖಿಮ್ಜಿ ಸಮೂಹವನ್ನು ಮುನ್ನಡೆಸಿದ್ದ ಅವರು ದೇಶದ ಬೆಳವಣಿಗೆಗೆ ನೀಡಿದ ಕೊಡುಗೆಗಳನ್ನು ಗುರುತಿಸಿ ಒಮಾನ್ ಪೌರತ್ವ ಮತ್ತು ಶೇಖ್ ಸ್ಥಾನಮಾನವನ್ನು ಪಡೆದಿದ್ದರು. ಅವರು ವಿಶ್ವದ ಏಕೈಕ ಹಿಂದೂ ಶೇಖ್ ಎಂಬ ಬಿರುದುಗೂ ಅರ್ಹರಾಗಿದ್ದರು. ಕನಕ್ಸಿ ಖಿಮ್ಜಿ 1936 ರಲ್ಲಿ ಮಸ್ಕತ್‌ನಲ್ಲಿ ಜನಿಸಿದರು. ಮುಂಬೈನಲ್ಲಿ ಶಿಕ್ಷಣ ಪಡೆದ ಅವರು 1970 ರಲ್ಲಿ 144 ವರ್ಷಗಳ ಹಳೆಯ ಕುಟುಂಬ ವ್ಯವಹಾರವಾದ ಖಿಮ್ಜಿ ಸಂಸ್ಥೆಯ ನೇತೃತ್ವ ವಹಿಸಿದರು. ಕನಕ್ಸಿ ಖಿಮ್ಜಿ ಅವರ ನೇತೃತ್ವದಲ್ಲಿ ಖಿಮ್ಜಿ ಸಮೂಹವು ವ್ಯಾಪಾರ ವೈವಿಧ್ಯತೆಯ ಹಾದಿಯಲ್ಲಿ ಸಾಗಿತ್ತು.

- Advertisement -

ಇಂದು ಸಂಸ್ಥೆಯ ವಹಿವಾಟು ವರ್ಷಕ್ಕೆ ಒಂದು ಶತಕೋಟಿ ಡಾಲರ್ ಆಗಿದೆ. ಖಿಮ್ಜಿ ಸಮೂಹವು ಕನ್ಸ್ಯೂಮರ್ ಉತ್ಪನ್ನಗಳು, ಲೈಫ್ ಸ್ಟೈಲ್, ಇನ್ಫ್ರಾಸ್ಟ್ರಕ್ಚರ್ಸ್, ಪ್ರಾಜೆಕ್ಟ್ಸ್ ಮತ್ತು ಲಾಜಿಸ್ಟಿಕ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಮೂಹವು 400 ಕ್ಕೂ ಹೆಚ್ಚು ಜಾಗತಿಕ ಬ್ರಾಂಡ್‌ಗಳಿಗೆ ಒಮಾನ್‌ನಲ್ಲಿ ಮಾರ್ಕೆಟಿಂಗ್ ಪಾಲುದಾರವಾಗಿದೆ. ಶೇಖ್ ಕನಕ್ಸಿ ಅವರು ಒಮಾನ್‌ನಲ್ಲಿ ಭಾರತೀಯ ಸಮುದಾಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಒಮಾನ್‌ನ ಮೊದಲ ಭಾರತೀಯ ಶಾಲೆಯ ಸ್ಥಾಪಕರಾಗಿದ್ದಾರೆ. ಕನಕ್ಸಿ ಖಿಮ್ಜಿಯವರ ನಿಧನಕ್ಕೆ ಒಮಾನ್‌ನ ವಿವಿಧ ವರ್ಗದ ಜನರು ಸಂತಾಪ ಸೂಚಿಸಿದ್ದಾರೆ.

Join Whatsapp