ಮಂಗಳೂರು ನಗರ ದಕ್ಷಿಣದಲ್ಲಿ ಈ ಬಾರಿ ಜೆಡಿಎಸ್ ಖಾತೆ ತೆರೆಯಲಿದೆ: ಸುಮಿತ್ ಸುವರ್ಣ ಬೋಳಾರ್ ವಿಶ್ವಾಸ

Prasthutha|

ಮಂಗಳೂರು : ಈ ಬಾರಿ ಮಂಗಳೂರು  ನಗರ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸುಮತಿ‌ ಹೆಗ್ಡೆಯವರು ವಿಜಯಿಯಾಗುವುದರೊಂದಿಗೆ ದ.ಕ.‌ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ  ಖಾತೆ ತೆರೆಯಲಿದೆ ಎಂದು ದ.ಕ. ಜಿಲ್ಲಾ ಜೆಡಿಎಸ್ ಚುನಾವಣಾ ವೀಕ್ಷಕ ಅಡ್ವೊಕೇಟ್ ಸುಮಿತ್ ಸುವರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -

ಇದೀಗ  ಮಂಗಳೂರು ನಗರ ದಕ್ಷಿಣ ಕ್ಷೇತ್ರದ  ಜೆಡಿಎಸ್ ಅಭ್ಯರ್ಥಿ ಸುಮತಿ ಹೆಗ್ಡೆಯವರು ಎಲ್ಲಾ  ಕ್ಷೇತ್ರಗಳ ಅಭ್ಯರ್ಥಿಗಳಿಗಿಂತಳೂ ಜನರ ಸಂಪರ್ಕ ಸಾಧಿಸುವ ವಿಚಾರದಲ್ಲಿ  ಮುಂಚೂಣಿಯಲ್ಲಿದ್ದು ,  ಈ ಬಾರಿ ಜಯಗಳಿಸುವುದು ಖಚಿತ ಎಂದಿದ್ದಾರೆ.  ಚುನಾವಣಾ ಪೂರ್ವ ತಯಾರಿಯ ಎಲ್ಲಾ ಮಜಲುಗಳನ್ನು ಇವರು  ಪೂರ್ತಿರ್ಗೊಳಿಸಿದ್ದು , ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂಧಿಸಿದ್ದಾರೆ. ಕ್ಷೇತ್ರದ  ಜನರು  ಈ ಬಾರಿ  ಬದಲಾವಣೆ ಬುಯಸಿ ಮತದಾನ ಮಾಡುವ ಬಗ್ಗೆ  ವಾಗ್ಧಾನ ಮಾಡಿದ್ದು  ಮಾತ್ರವಲ್ಲ  ಹಿಂದುಳಿದ  ವರ್ಗಗಳ  ಜನಾಂಗದವರ ಬೆಂಬಲದ ನಡುವೆ  ಎಲ್ಲಾ  ಜಾತಿ , ಧರ್ಮದ ಜನಾಂಗದವರ ಮತ ಗಳಿಸುವಲ್ಲಿ ಸುಮತಿ ಹೆಗ್ಡೆಯವರು ಯಶಸ್ವಿಯಾಗಲಿದ್ದು ಈ ಮೂಲಕ   ದ.ಕ.‌ಜಿಲ್ಲೆಯಲ್ಲಿ  ಜೆಡಿಎಸ್ ಖಾತೆ ತೆರೆದು ಇತಿಹಾಸ ಬರೆಯಲಿದೆ  ಎಂದು  ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.