SDPI ಬಿಜೆಪಿಯನ್ನು ಶಕ್ತವಾಗಿ ಎದುರಿಸುವ ಜೊತೆಗೆ ಅದಕ್ಕೆ ಪುಷ್ಟಿ ನೀಡುವ ಕಾಂಗ್ರೆಸನ್ನೂ ಎದುರಿಸಲಿದೆ: ಎಮ್. ಕೆ. ಫೈಝಿ

Prasthutha|

- Advertisement -

SDPI ಬಂಟ್ವಾಳ ವತಿಯಿಂದ ಬಹಿರಂಗ ಪ್ರಚಾರ ಸಭೆ

ಬಂಟ್ವಾಳ : ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣಾ ಪೂರ್ವ ತಯಾರಿಯ ನಿಮಿತ್ತ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ವತಿಯಿಂದ ಇಂದು ಬಿಸಿ ರೋಡ್ ಕೈಕಂಬ ಜಂಕ್ಷನ್ ನಲ್ಲಿ ಬೃಹತ್ ಬಹಿರಂಗ ಪ್ರಚಾರ ಸಭೆ ನಡೆಯಿತು.

- Advertisement -

ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರದ ಅಧ್ಯಕ್ಷ ಮೂನಿಷ್ ಆಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ “2013 ರಲ್ಲಿ ಸಿದ್ದರಾಮಯ್ಯ, ಅಧಿಕಾರಕ್ಕೆ ಬಂದರೆ ಕಲ್ಲಡ್ಕ ಪ್ರಭಾಕರ ಭಟ್ ಕೇಸ್ ಮರು ಓಪನ್ ಮಾಡುತ್ತೇವೆ ಎಂದು ಹೇಳಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಆದ ಬಳಿಕನೂ ನೀವು ಕೊಟ್ಟ ಗ್ಯಾರಂಟಿಗೆ ಯಾಕೆ ಬರಗಾಲ ಬಂತು? ಎಂದು ಪ್ರಾಸ್ತಾವಿಕವಾಗಿ ನುಡಿದರು.

ಎಸ್ ಡಿ ಪಿ ಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಮಾತನಾಡಿ ” ಸಂಪೂರ್ಣ ಅರಾಜಕತೆಯಿಂದ ಕೂಡಿರುವ ರಾಜ್ಯದ ಕ್ಷೇಮಾಭಿವೃದ್ಧಿಗೆ ಇಲ್ಯಾಸ್ ತುಂಬೆ ಅವರನ್ನು ಬಂಟ್ವಾಳದಲ್ಲಿ ಗೆಲ್ಲಿಸುವ ಮೂಲಕ ಪ್ರಥಮ ನಾಂದಿ ಹಾಡೋಣ ಎಂದರು.

ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್ ಡಿ ಪಿ ಐ ರಾಷ್ಟ್ರೀಯ ಅಧ್ಯಕ್ಷ ಎಮ್ ಕೆ ಫೈಝಿ ‘ ಅತೀ ಕಠೋರವಾಗಿರುವ ಹಿಂದುತ್ವ ಫ್ಯಾಸಿಸಂ ಬೇರೂರಿರುವ ಬಿಜೆಪಿಯನ್ನು ಎದುರಿಸಲು ಸಮರ್ಥ ಪಕ್ಷ ಎಸ್ ಡಿ ಪಿ ಐ ಅಲ್ಲದೇ ಬೇರೊಂದು ಪಕ್ಷ ಇಲ್ಲ. ನಮ್ಮ ಸ್ಪರ್ಧೆ ಸರ್ವಾಧಿಕಾರ ಧೋರಣೆಗಳ ವಿರುದ್ಧವಾಗಿದೆ. ಫ್ಯಾಸಿಸ್ಟ್ ಬಿಜೆಪಿಯನ್ನು ಕಟ್ಟಿಹಾಕುವಲ್ಲಿ ವಿಫಲವಾದ ಕಾಂಗ್ರೆಸ್ ,ಇದರ ಬೆಳವಣಿಗೆಗೆ ನೇರ ಕಾರಣವಾಗಿ ಈಗ ಪಶ್ಚಾತ್ತಾಪ ಪಡುತ್ತಿದೆ’ ಎಂದರು.

ಇನ್ನೋರ್ವ ಮುಖ್ಯ ಅತಿಥಿಯಾದ ಬಂಟ್ವಾಳ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ “ಸರ್ವ ಮತದಾರ ಬಾಂಧವರು ನಿಷ್ಕಳಂಕ ಮನಸ್ಸಿನಿಂದ ಈ ಬಾರಿಯ ಚುನಾವಣೆಯನ್ನು ಸ್ವೀಕರಿಸಿ, ದೇಶಕ್ಕೆ ಮಾದರಿಯುತ ಬಂಟ್ವಾಳವನ್ನಾಗಿ ಮಾಡಲು ಪಣತೊಟ್ಟು, ಈ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿಯಾದ ನನ್ನನ್ನು ಆರಿಸಿ” ಎಂದು ಸೇರಿದ ಜನತೆಯೊಂದಿಗೆ ಕೇಳಿದರು.

ಇನ್ನೋರ್ವ ಮುಖ್ಯ ಅತಿಥಿಯಾದ ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆನಂದ್ ಮಿತ್ತಬೈಲ್ ” ಎಸ್ ಡಿ ಪಿ ಐ ಸರ್ವಧರ್ಮೀಯರ ಪಕ್ಷ. ದಲಿತರ, ಹಿಂದುಳಿದ ವರ್ಗದವರ, ಅಲ್ಪಸಂಖ್ಯಾತರ ಆಶಾಕಿರಣವಾದ ಎಸ್ ಡಿ ಪಿ ಐ ಯನ್ನು ಈ ಬಾರಿ ಆರಿಸಬೇಕು ಎಂದು ಕೇಳಿಕೊಂಡರು.

ಮಹಿಳಾ ನಾಯಕಿ ಶಾಹಿದಾ ತಸ್ನೀಮ್ ಮಾತನಾಡಿ “ಮಹಿಳೆಯರ, ಮಕ್ಕಳ ರಕ್ಷಣೆಯು ಮಂದಗತಿಯಲ್ಲಿರುವ ನಮ್ಮ ರಾಜ್ಯದಲ್ಲಿ ಎಸ್ ಡಿ ಪಿ ಐ ಅಭ್ಯರ್ಥಿಯೊಬ್ಬರನ್ನು ಆರಿಸಿ ಮಕ್ಕಳ ಮತ್ತು ಮಹಿಳೆಯರ ಸಬಲೀಕರಣಕ್ಕೆ ನಾವು ಕಾರಣರಾಗೋಣ ಎಂದು ಹೇಳಿದರು.

ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಮಾತನಾಡಿ “ಎಸ್ ಡಿ ಪಿ ಐ ಜಾತ್ಯಾತೀತ, ಪ್ರಜಾಪ್ರಭುತ್ವ ಸಿದ್ಧಾಂತದ ನೈಜ ಭಾರತವನ್ನು ನಿರ್ಮಾಣ ಮಾಡುವ ಕನಸನ್ನು ಹೊತ್ತು ಕಾರ್ಯಾಚರಿಸುವಾಗ ಈ ಹೆಜ್ಜೆಗೆ ಬಿಜೆಪಿ ಅಡ್ಡ ಬಂದರೂ, ಕಾಂಗ್ರೆಸ್ ಅಡ್ಡಿ ಬಂದರೂ ನಾವು ಒಂದೇ ದೃಷ್ಟಿಯಲ್ಲಿ ಕಾಣುವುದು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ದ.ಕ ಜಿಲ್ಲಾ ಕಾರ್ಯದರ್ಶಿ ಸುಹೈಲ್ ಖಾನ್, ದ.ಕ ಜಿಲ್ಲಾ ಸಮಿತಿ ಸದಸ್ಯರುಗಳಾದ ಅಬೂಬಕ್ಕರ್ ಮದ್ದ , ಯೂಸುಫ್ ಆಲಡ್ಕ, ಜಿಲ್ಲಾ ನಾಯಕ ಐ.ಎಂ.ಆರ್. ಇಕ್ಬಾಲ್ ಗೂಡಿನ ಬಳಿ, ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಾಹುಲ್ ಹಮೀದ್ ಎಸ್.ಎಚ್, ಎಸ್ ಡಿ ಪಿ ಐ ಬಂಟ್ವಾಳ ಕ್ಷೇತ್ರ ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿ,ಎಸ್ ಡಿ ಪಿ ಐ ಬಂಟ್ವಾಳ ಪುರಸಭಾ ಅಧ್ಯಕ್ಷ ಶರೀಫ್ ವಳವೂರು, ಬಂಟ್ವಾಳ ಪುರಸಭಾ ಸದಸ್ಯೆ ಝೀನತ್ ಗೂಡಿನ ಬಳಿ, ಎಸ್ ಡಿ ಪಿ ಐ ಪುರಸಭಾ ಸದಸ್ಯರುಗಳಾದ ಸಂಶಾದ್, ಝೀನತ್ ಗೂಡಿನಬಳಿ, ಇದ್ರೀಸ್ ಪಿ ಜೆ, ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಬೀನಾ ನಂದಾವರ ಮತ್ತಿತರರು ಉಪಸ್ಥಿತರಿದ್ದರು.