ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಣೇಶ್ ಪೂಜಾರಿ ಚಿಕಿತ್ಸೆಗೆ 17 ಲಕ್ಷ ರೂ. ನೀಡಿದ ಇನಾಯತ್ ಅಲಿ

Prasthutha|

ಮಂಗಳೂರು:  ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಮಾನವೀಯತೆ ಮೆರೆದ ಸಂದರ್ಭವೊಂದು ಕ್ಷೇತ್ರದಲ್ಲಿ ಕಂಡುಬಂದಿದೆ. ಗಣೇಶ್ ಪೂಜಾರಿ ಎನ್ನುವವರು ರಸ್ತೆ ಅಪಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ 45 ದಿನ ಕೋಮಾದಲ್ಲಿದ್ದರು. ಇಂತಹ ಸಂಕಷ್ಟಕ್ಕೆ ಒಳಗಾಗಿದ್ದ ಯುವಕನೋರ್ವನ ಕುಟುಂಬಕ್ಕೆ ಸಹಾಯ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ.

- Advertisement -

ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಣೇಶ್ ಪೂಜಾರಿ ಅವರ  ಆಸ್ಪತ್ರೆ ಬಿಲ್ ಒಟ್ಟು 24 ಲಕ್ಷ ರೂಪಾಯಿ ಆಗಿತ್ತು. ಇಷ್ಟು ದೊಡ್ಡ ಮೊತ್ತದ ಬಿಲ್ ಕಟ್ಟಲಾಗದೆ ಗಾಯಾಳು ಕುಟುಂಬಸ್ಥರು ಕಂಗಾಲಾಗಿದ್ದರು. ಈ ಬಗ್ಗೆ ಸಹಕಾರ ನೀಡುವಂತೆ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಬಳಿ ಗಣೇಶ್ ಪೋಷಕರು ಅಂಗಲಾಚಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಈ ವಿಷಯ ತಿಳಿದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಖಾಸಗಿ ಆಸ್ಪತ್ರೆಯ 17 ಲಕ್ಷ ರೂಪಾಯಿ ಬೀಲ್ ಪಾವತಿಸಿ ಗಣೇಶ್ ಕುಟುಂಬಕ್ಕೆ ನೆರವಾಗಿದ್ದಾರೆ.